HomeKarnatakaಪಕ್ಕದ ಊರಿಗೆ ಪೂಜೆಗೆ ಹೋದ ಅರ್ಚಕ ನಿಗೂಢವಾಗಿ ಶವವಾಗಿ ಪತ್ತೆ

ಪಕ್ಕದ ಊರಿಗೆ ಪೂಜೆಗೆ ಹೋದ ಅರ್ಚಕ ನಿಗೂಢವಾಗಿ ಶವವಾಗಿ ಪತ್ತೆ

ಮಂಡ್ಯ: ಪಕ್ಕದ ಊರಿಗೆ ಪೂಜೆಗೆಂದು ಹೋದ ಅರ್ಚಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದಲಿಂಗಪ್ಪ (46) ಮೃತ ಅರ್ಚಕರು. ಶೆಟ್ಟಿಹಳ್ಳಿ ಗ್ರಾಮಕ್ಕೆ ಪೂಜೆಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದ ಸಿದ್ದಲಿಂಗಪ್ಪ ಅವರ ಸ್ಕೂಟರ್​​ ಸಿಡಿಎಸ್ ನಾಲೆಯಲ್ಲಿ ತೇಲುತ್ತಿರೋದನ್ನು ಕಂಡ ಗ್ರಾಮಸ್ಥರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿದ್ದಲಿಂಗಪ್ಪ ಮೃತದೇಹ ಮೈಮೇಲೆ ಬಟ್ಟೆ ಇಲ್ಲದ ರೀತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿದೆ. ಅಲ್ಲದೆ ನಾಲೆ ಬಳಿ ರಕ್ತದ ಕಲೆಗಳು ಕಂಡುಬಂದ ಕಾರಣ, ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಸ್ಥಾನವೊಂದರ ಅರ್ಚಕರಾಗಿದ್ದ ಸಿದ್ದಲಿಂಗಪ್ಪ, ತಾನಾಯ್ತು, ತನ್ನ ವೃತ್ತಿ ಆಯ್ತು ಅಂತ ಪೂಜೆ-ಪುನಸ್ಕಾರ ಮಾಡಿಕೊಂಡು ಇದ್ದವರು. ಹೀಗಿರುವಾಗ ಪೂಜೆಗೆಂದು ಪಕ್ಕದ ಊರಿಗೆ ಹೋಗಿದ್ದ ಅವರಿಗೆ ಆಗಿದ್ದೇನು ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡತೊಡಗಿದೆ.

ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಕುಟುಂಬಸ್ಥರು,ಸಿದ್ದಲಿಂಗಪ್ಪ ಅವರಿಗೆ ಯಾರು ಕೂಡ ವೈರಿಗಳು ಇರಲಿಲ್ಲ ಎಂದಿದ್ದಾರೆ. ಶ್ರೀರಂಗಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular