HomeLatest NewsBIG NEWS: ಆಸ್ತಿಗಾಗಿ ವಿರೋಧಿಗಳ ಜೊತೆ ಸೇರಿ ಅಪ್ಪನಿಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ...

BIG NEWS: ಆಸ್ತಿಗಾಗಿ ವಿರೋಧಿಗಳ ಜೊತೆ ಸೇರಿ ಅಪ್ಪನಿಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ ಮಗ: ನಾಲ್ವರು ಆರೋಪಿಗಳು ಅರೆಸ್ಟ್

ಮಂಡ್ಯ: ತಂದೆಯ ಕೋಟ್ಯಂತರ ರೂಪಾಯಿ ಆಸ್ತಿಗಾಗಿ ಮಗನೊಬ್ಬ ವಿರೋಧಿಗಳ ಜೊತೆ ಸೇರಿ ಅಪ್ಪನಿಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆಯೊಡ್ಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ಅವರ ಪುತ್ರ ಪ್ರಣಬ್, ಮಹೇಶ್, ಈಶ್ವರ್ ಹಾಗೂ ಪ್ರೀತಮ್ ಬಂಧಿತ ಆರೋಪಿಗಳು. ಸತೀಶ್ ಮದ್ದೂರು ಸೇರಿದಂತೆ ವಿವಿಧೆಡೆ ರಾಣಿ ಐಶ್ವರ್ಯ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಶ್ತೇಟ್ ಉದ್ಯಮ ನಡೆಸುತ್ತಿದ್ದಾರೆ. ಆದರೆ ಮಗ ಪ್ರಣಬ್ ತಂದೆಯ ಜೊತೆ ಆಸ್ತಿ ವಿಚಾರವಾಗಿ ಕಿರಿಕ್ ಮಾಡಿಕೊಂಡಿದ್ದಾನೆ. ಅಲ್ಲದೇ ತಂದೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದಲ್ಲದೇ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟು ಅಪ್ಪನನ್ನೇ ಬ್ಲ್ಯಾಕ್ ಮೇಲ್ ಮಾಡಿ ಬೆದರಿಸಿದ್ದಾನೆ.

ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಅಪ್ಪನಿಗೆ ಖೆಡ್ಡಾ ತೋಡಿದ್ದಾನೆ. ಅಪ್ಪನ ಭಾವ ಚಿತ್ರಕ್ಕೆ ಅಶ್ಲೀಲ ಫೋಟೋ, ವಾಯ್ಸ್ ಎಡಿಟ್ ಮಾಡಿ, ವಾಟ್ಸಪ್ ಗ್ರೂಪ್ ಗೆ ಶೇರ್ ಮಾಡಿದ್ದಾನೆ. ಇದರಿಂದ ನೊಂದ ತಂದೆ ಮದ್ದೂರು ಪೊಲೀಸ್ ಠಾನೆಗೆ ದೂರು ನೀಡಿದ್ದಾರೆ. ಉದ್ಯಮಿ ಸತೀಶ್ ದೂರಿನ ಮೇರೆಗೆ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular