HomeKarnatakaBIG NEWS: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋದ ತಂದೆಯೂ ಅರೆಸ್ಟ್

BIG NEWS: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋದ ತಂದೆಯೂ ಅರೆಸ್ಟ್

ಮಂಡ್ಯ: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲೆಂದು ಹೋದ ತಂದೆಯೂ ಅರೆಸ್ಟ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವಣ್ಣ ಬಂಧಿತರಾದವರು. ಶಿವಣ್ಣ ಪುತ್ರ ಮಧುಸೂದನ್ ಜೈಲು ಸೇರಿದ್ದ. ಜೈಲಿನಲ್ಲಿದ್ದ ಮಧುಸೂಧನ್ ತಂದೆಗೆ ಕರೆ ಮಡಿ ನನ್ನ ಪರಿಚಿತನೊಬ್ಬ ಮಳವಳ್ಲಿಯಲ್ಲಿ ಬಟ್ಟೆ ಇದ್ದ ಬ್ಯಾಗ್ ಕೊಡುತ್ತಾನೆ. ತೆಗೆದುಕೊಂಡು ಬಾ ಎಂದು ಹೇಳುತ್ತಾನೆ. ಮಗನ ಮಾತು ಕೇಳಿ ಶಿವಣ್ಣ ಮಳವಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯಿಂದ ಬಟ್ಟೆ ಬ್ಯಾಗ್ ಪಡೆದು ಮಂಡ್ಯ ಕಾರಗೃಹಕ್ಕೆ ಹೋಗಿದ್ದಾರೆ.

ಕಾರಾಗೃಹದಲ್ಲಿ ಜೈಲು ಸಿಬ್ಬಂದಿ ಬ್ಯಾಗ್ ಪ್ರಿಶೀಲಿಸಿದಾಗ ಅದರಲ್ಲಿ 20 ಗ್ರಾಮ್ ಗಾಂಜಾ ಪತ್ತೆಯಾಗಿದೆ. ತಕ್ಷಣ ಕಾರಾಗೃಹ ಸಿಬ್ಬಂದಿ ಶಿವಣ್ಣನನ್ನು ಬಂಧಿಸಿ ವಿಚರಣೆ ನಡೆಸಿದ್ದಾರೆ. ಮಗ ಹೇಳಿದಂತೆ ಬಟ್ಟೆ ಬ್ಯಾಗ್ ತಂದಿದ್ದೇನೆ ಎಂದಿದ್ದಾರೆ. ಎನ್ ಡಿ ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಶಿವಣ್ಣ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular