HomeKarnatakaಕ್ಯಾಬ್ ಗಾಗಿ ಕಾಯುತ್ತಿದ್ದ ಯುವತಿಯ ಬಳಿ ಬಂದು ರೇಟ್ ಕೇಳಿ ಅಸಭ್ಯ ವರ್ತನೆ: ಕಾಮುಕ ಅರೆಸ್ಟ್

ಕ್ಯಾಬ್ ಗಾಗಿ ಕಾಯುತ್ತಿದ್ದ ಯುವತಿಯ ಬಳಿ ಬಂದು ರೇಟ್ ಕೇಳಿ ಅಸಭ್ಯ ವರ್ತನೆ: ಕಾಮುಕ ಅರೆಸ್ಟ್

ಬೆಂಗಳೂರು: ಯುವತಿಯೊಬ್ಬರು ಕ್ಯಾಬ್ ಗಾಗಿ ಕಾಯುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ರೇಟ್ ಎಷ್ಟು ಎಂದು ಕೇಳಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಯುವತಿಯೊಬ್ಬರು ಎರಡು ದಿನಗಳ ಹಿಂದೆ ರಾಮಮೂರ್ತಿ ನಗರದಲ್ಲಿ ರಾತ್ರಿ ಮನೆಗೆ ತೆರಳಲು ಕ್ಯಾಬ್ ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಯುವತಿ ಬಳಿ ಬೈಕ್ ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯ ಬಳಿ ನಿನ್ನ ರೇಟ್ ಎಷ್ಟು? 10 ಸಾವಿರ ಕೊಡುತ್ತೇನೆ ನನ್ನ ಜೊತೆ ಬಾ ಹೋಗೋಣ ಎಂದಿದ್ದಾನೆ. ಯುವತಿ ನೀನ್ಯಾಕೆ ನನ್ನನ್ನು ಈ ರೀತಿ ಕೇಳುತ್ತಿದ್ದೀಯಾ? ಎಲ್ಲವನ್ನು ನಾನು ರೆಕಾರ್ಡ್ ಮಾಡುತ್ತಿದ್ದೇನೆ. ಪೊಲೀಸರಿಗೆ ದೂರು ಕೊಡುತ್ತೇನೆ. ಇದನ್ನು ಪೋಸ್ಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಯುವತಿ ಧೈರ್ಯವಾಗಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಯುವತಿ ರೆಕಾರ್ಡ್ ಮಾಡುತ್ತಿರುವುದಾಗಿ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ ಬಳಿಕವೂ ಕಾಮುಕ ಅವಾಚ್ಯವಾಗಿ ನಿಂದಿಸಿದ್ದಾನೆ. ಬಳಿಕ ಸ್ಥಳದಿಂದ ತೆರಳಿದ್ದಾನೆ.

ಈ ಬಗ್ಗೆ ಯುವತಿ ರಾಮಮೂರ್ತಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೈಕ್ ನಂಬರ್ ಆಧರಿಸಿ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಜಯ ರಾಘವ್(42) ಎಂದು ಗುರುತಿಸಲಾಗಿದೆ. ಈತ ರಾಮಮೂರ್ತಿನಗರದ ಎನ್ ಆರ್ ಐ ಲೇಔಟ್ ನಿವಾಸಿಯಾಗಿದ್ದು, ಹಣ್ಣಿನ ವ್ಯಾಪಾರಿ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular