HomeLatest Newsಅನಾರೋಗ್ಯಕ್ಕೂ ರಜೆ ಇಲ್ಲ ಎಂದ ಮ್ಯಾನೇಜರ್‌; ಜೆನ್‌ ಝೀ ಉದ್ಯೋಗಿ ಮಾಡಿದ್ದೇನು ಗೊತ್ತಾ?

ಅನಾರೋಗ್ಯಕ್ಕೂ ರಜೆ ಇಲ್ಲ ಎಂದ ಮ್ಯಾನೇಜರ್‌; ಜೆನ್‌ ಝೀ ಉದ್ಯೋಗಿ ಮಾಡಿದ್ದೇನು ಗೊತ್ತಾ?

ಸಾಮಾನ್ಯವಾಗಿ ಉದ್ಯೋಗಿಗಳು ವೇತನ, ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ರಾಜೀನಾಮೆ ನೀಡುತ್ತಾರೆ. ಆದರೆ ಇಲ್ಲೊಬ್ಬ ಜೆನ್‌ ಝೀ ಉದ್ಯೋಗಿ ಅನಾರೋಗ್ಯದ ಸಮಯದಲ್ಲಿ ರಜೆ ನೀಡದ ಮ್ಯಾನೇಜರ್‌ ನಡೆಗೆ ಬೇಸತ್ತು ಕೆಲಸವನ್ನೇ ತೊರೆದಿದ್ದಾರೆ.

ಅನಾರೋಗ್ಯದ ಕಾರಣ ರಜೆ ಕೇಳಿದ್ದ ಉದ್ಯೋಗಿಗೆ ಮ್ಯಾನೇಜರ್‌ ರಜೆ ನೀಡುವ ಬದಲು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದರು. ಇದರಿಂದ ಬೇಸರಗೊಂಡ ಉದ್ಯೋಗಿ, ರಜೆಯ ಅವಧಿಯಲ್ಲೇ ಬೇರೆ ಕಂಪನಿಯ ಸಂದರ್ಶನಕ್ಕೆ ಹಾಜರಾಗಿ ಹೊಸ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಬಳಿಕ ಕಂಪನಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಶೀತಲ್ ಎಂಬುವವರು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರೊಬ್ಬರು ಕಾರ್ಪೊರೇಟ್‌ ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ತಂಡದಲ್ಲಿದ್ದ ಜೆನ್‌ ಝೀ ತಲೆಮಾರಿನ ಯುವ ಉದ್ಯೋಗಿಯೊಬ್ಬರು ಇತ್ತೀಚೆಗೆ ಅನಾರೋಗ್ಯದ ಕಾರಣ ರಜೆ ಕೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ರಜೆ ನೀಡಿದ ಮ್ಯಾನೇಜರ್‌, ಕೆಲವು ದಿನ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಉದ್ಯೋಗಿ ರಜೆಯನ್ನು ಇನ್ನೂ ಎರಡು ದಿನ ಮುಂದುವರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ಕಂಪನಿಯ ಸಂದರ್ಶನಕ್ಕೆ ತೆರಳಿ, ಕೆಲಸವನ್ನೂ ಪಡೆದುಕೊಂಡಿದ್ದಾರೆ.

https://x.com/sheetalbytheway/status/2096176010618388909

ಹೊಸ ಕೆಲಸ ಖಚಿತವಾದ ಬಳಿಕ ಮರುದಿನವೇ ತಮ್ಮ ಕಂಪನಿಗೆ ರಾಜೀನಾಮೆ ನೀಡಿದ್ದಾರೆ.ಇಷ್ಟಕ್ಕೆ ಈ ವಿಚಾರ ಮುಗಿದಿಲ್ಲ. ತಂಡದಲ್ಲಿದ್ದ ಮತ್ತೊಬ್ಬ ಜೆನ್‌ ಝೀ ಉದ್ಯೋಗಿಯೂ ಇದೇ ಹಾದಿ ಹಿಡಿದಿದ್ದಾರೆ. ಅವರೂ ಹೊಸ ಕೆಲಸ ಪಡೆದುಕೊಂಡು ರಾಜೀನಾಮೆ ನೀಡಿದ್ದಾರೆ. ತಮ್ಮ ಬಳಿ ಉಳಿದಿರುವ ಗಳಿಕೆ ರಜೆಯನ್ನು ನೋಟಿಸ್‌ ಪೀರಿಯಡ್‌ಗೆ ಹೊಂದಿಸಿಕೊಳ್ಳುವಂತೆ ಮ್ಯಾನೇಜರ್‌ಗೆ ತಿಳಿಸಿದ್ದಾರೆ. ಅಲ್ಲದೆ, ಮರುದಿನದಿಂದ ಕೆಲಸಕ್ಕೆ ಬರುವುದಿಲ್ಲ ಎಂದೂ ಹೇಳಿದ್ದಾರೆ.

ಈ ಘಟನೆ ಕುರಿತ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ಬಂದಿವೆ.

“ನಾನು Gen Z ಮನೋಭಾವದ ಅಭಿಮಾನಿಯಲ್ಲ. ಆದರೆ ರಜೆ ಕೇಳಿದಾಗ ಮನೆಯಿಂದ ಕೆಲಸ ಮಾಡುವಂತೆ ಹೇಳುವುದು ಸರಿಯಲ್ಲ,” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು, “ಆರೋಗ್ಯಕ್ಕಿಂತ ಮುಖ್ಯವಾದ ಕೆಲಸ ಯಾವುದೂ ಇಲ್ಲ. ಅಷ್ಟು ತುರ್ತು ಕೆಲಸ ಇದ್ದರೂ ಆರೋಗ್ಯವನ್ನು ಕಡೆಗಣಿಸಬಾರದು,” ಎಂದು ಉದ್ಯೋಗಿಯ ಪರವಾಗಿ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular