HomeKarnatakaತಮ್ಮನನ್ನೇ ಕೊಲೆಗೈದು ಸ್ಮಶಾನಕ್ಕೆ ಹೋಗಿ ಭಸ್ಮ ಹಚ್ಚಿಕೊಂಡು ಹುಚ್ಚಾಟ ಮೆರೆದ ಅಣ್ಣ

ತಮ್ಮನನ್ನೇ ಕೊಲೆಗೈದು ಸ್ಮಶಾನಕ್ಕೆ ಹೋಗಿ ಭಸ್ಮ ಹಚ್ಚಿಕೊಂಡು ಹುಚ್ಚಾಟ ಮೆರೆದ ಅಣ್ಣ

ಬಾಗಲಕೋಟೆ: ಅಣ್ಣನೊಬ್ಬ ತನ್ನ ತಮ್ಮನನ್ನೇ ಹತ್ಯೆಗೈದು ಬಳಿಕ ಸ್ಮಶಾನಕ್ಕೆ ಹೋಗಿ ಮುಖಕ್ಕೆ ಭಸ್ಮ ಹಚ್ಚಿಕೊಂಡು ಹುಚ್ಚಾಟ ಮೆರೆದ ಘಟನೆ ಬಾಗಲಕೋಟೆಯ ಮುಧೋಳ ತಾಲೂಕಿನ ಗಾಂಧಿ ಚೌಕ್ ನಲ್ಲಿ ನಡೆದಿದೆ.

ಸುನೀಲ್ ರಜಪೂತ (24) ಅಣ್ಣನಿಂದಲೇ ಕೊಲೆಯಾದ ದುರ್ದೈವಿ. ಆರೋಪಿ ಅಣ್ಣ ಸುಖೇನ್ ಸಿಂಗ್ ರಜಪೂತ ತಮ್ಮ ಸುನೀಲ್ ರಾತ್ರಿ ನಿದ್ದೆ ಮಾಡಿದ್ದಾಗ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬಳಿಕ ಸ್ಮಶಾನಕ್ಕೆ ಹೋಗಿ ಮುಖಕ್ಕೆ ಭಸ್ಮ ಲೇಪಿಸಿಕೊಂಡು ತನ್ನ ತಮ್ಮನ ಶವ ಬರುವುದಿದೆ ಎಂದು ಹುಚ್ಚಾಟ ಮೆರೆದಿದ್ದಾನೆ. ಚಿತ್ರಕಲೆ ಬಗ್ಗೆ ಅಭ್ಯಾಸ ಮಾಡುತ್ತಿದ್ದ ಸುಖೇನ್ ಕಳೆದ ಕೆಲ ವರ್ಷಗಳಿಂದ ಯಾವುದೇ ಕೆಲಸವನ್ನೂ ಮಾಡದೇ ವಿಚಿತ್ರವಾಗಿ ವರ್ತಿಸುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಲ್ಲಿ ತಂದೆ-ತಾಯಿ, ಅಜ್ಜಿ ಸಂಬಂಧಿಕರ ಮನೆಗೆಂದು ಹೋಗಿದ್ದರು. ಈ ವೇಳೆ ತನ್ನ ಸಹೋದರನ್ನನ್ನೇ ಹತ್ಯೆಗೈದಿದ್ದಾನೆ. ಆರೋಪಿ ಸುಖೇನ್ ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular