HomeLatest NewsBREAKING : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಕುಡಿದ ಅಮಲಿನಲ್ಲಿ ಗೆಳೆಯನಿಗೆ ಚಾಕು ಇರಿದು ಕೊಂದ...

BREAKING : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಕುಡಿದ ಅಮಲಿನಲ್ಲಿ ಗೆಳೆಯನಿಗೆ ಚಾಕು ಇರಿದು ಕೊಂದ ವ್ಯಕ್ತಿ.!

ಬೆಂಗಳೂರು: ಸ್ನೇಹಿತರಿಬ್ಬರು ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸೀಗೇಹಳ್ಳಿಯಲ್ಲಿ ಜಾರ್ಖಂಡ್ ಮೂಲದ ಪವನ್ (40) ಕೊಲೆಯಾಗಿರುವ ದುರ್ದೈವಿ. ಮದ್ಯ ಸೇವನೆ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಣೇಶ್ ಎಂಬಾತ ಪವನ್ ಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಜಾರ್ಖಂಡ್ ಮೂಲದವರಾಗಿದ್ದ ಪವನ್ ಹಾಗೂ ಗಣೇಶ್ ಇಬ್ಬರೂ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಇಬ್ಬರ ನಡುವೆ ಜಗಳ ಆರಂಭವಾಗಿ ಪವನ್ ಎದೆಗೆ ಗಣೇಶ್ ಚಾಕು ಇರಿದಿದ್ದಾನೆ. ಘಟನ ಅಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಗಣೇಶ್ ನನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular