HomeIndiaದಾರಿ ತಪ್ಪಿದ ಪತ್ನಿ, ಆಕೆಯ ಪ್ರಿಯಕರನಿಂದಲೇ ಕೊಲೆಯಾದ ಪತಿ

ದಾರಿ ತಪ್ಪಿದ ಪತ್ನಿ, ಆಕೆಯ ಪ್ರಿಯಕರನಿಂದಲೇ ಕೊಲೆಯಾದ ಪತಿ

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿ ಆತನ ಪತ್ನಿ, ಪ್ರಿಯಕರ ಮತ್ತು ಆತನ ಸ್ನೇಹಿತ ಭಾಗಿಯಾಗಿದ್ದಾರೆ.

ರಾಜೇಶ್ ಕಶ್ಯಪ್ ಮೃತಪಟ್ಟ ವ್ಯಕ್ತಿ. ರಾಜೇಶ್ ಪತ್ನಿ ರೀಟಾ ಮತ್ತು ಫಾಹಿಮ್ ವಿವಾಹೇತರ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ರಾಜೇಶ್ ಮನೆಗೆ ಬರದಂತೆ ಫಾಹೀಮ್ ತಾಕೀತು ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಾದ ನಂತರ ಫಹೀಮ್ ತನ್ನ ಸ್ನೇಹಿತ ಸುರೇಶ್ ಮತ್ತು ರೀಟಾ ಜೊತೆಗೂಡಿ ಕಶ್ಯಪ್‌ ನನ್ನು ಕೊಲ್ಲಲು ಸಂಚು ರೂಪಿಸಿದ್ದ.

ಶುಕ್ರವಾರ ಮೂವರು ಸೇರಿ ರಾಜೇಶ್‌ನನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಜೋಡುವಾಳ ಗ್ರಾಮದ ಬಳಿ ಇರುವ ಒಣ ಕಾಲುವೆಗೆ ಶವ ಎಸೆದಿದ್ದಾರೆ.

ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಫಾಹಿಮ್ ಮತ್ತು ಸುರೇಶ್ ಅವರನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ ಎಂದು  ಕೊತ್ವಾಲಿ ಎಸ್‌ಹೆಚ್‌ಒ ರಾಜೀವ್ ಚೌಧರಿ ತಿಳಿಸಿದ್ದಾರೆ.

ವಿಚಾರಣೆ ವೇಳೆ ರಾಜೇಶ್ ಪತ್ನಿ ರೀಟಾ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ. ಈ ವಿಷಯ ತಿಳಿದ ರಾಜೇಶ್ ಮನೆಗೆ ಬರದಂತೆ ನಿರ್ಬಂಧ ಹೇರಿದ್ದ ಎಂದು ಫಾಹೀಮ್ ಪೊಲೀಸರಿಗೆ ತಿಳಿಸಿದ್ದಾನೆ.

ಸ್ಕಾರ್ಫ್, ಸಂತ್ರಸ್ತೆಯ ಪರ್ಸ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ರೀಟಾಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular