HomeInternational12 ಕೋಟಿ ಲಾಟರಿ ಗೆದ್ದರೂ ಪತ್ನಿಯಿಂದ ವಿಷಯ ಮುಚ್ಚಿಟ್ಟವನಿಗೆ 'ಬಿಗ್ ಶಾಕ್'

12 ಕೋಟಿ ಲಾಟರಿ ಗೆದ್ದರೂ ಪತ್ನಿಯಿಂದ ವಿಷಯ ಮುಚ್ಚಿಟ್ಟವನಿಗೆ ‘ಬಿಗ್ ಶಾಕ್’

ಚೀನಾದಲ್ಲಿ ವ್ಯಕ್ತಿಯೊಬ್ಬ ಎರಡು ವರ್ಷಗಳ ಹಿಂದೆ 12 ಕೋಟಿ ರೂಪಾಯಿಗಳನ್ನು ಲಾಟರಿಯಲ್ಲಿ ಗೆದ್ದಿದ್ದು, ಆದರೆ ಈ ವಿಷಯವನ್ನು ತನ್ನ ಪತ್ನಿಯಿಂದ ಮುಚ್ಚಿಟ್ಟು ಸಹೋದರಿಗೆ ಒಂದಷ್ಟು ಹಣ ಹಾಗೂ ಮಾಜಿ ಪತ್ನಿಗೆ ಫ್ಲ್ಯಾಟ್ ಖರೀದಿಸಲು ಮತ್ತಷ್ಟು ಹಣ ನೀಡಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಜೊ ಎಂಬ ಈ ವ್ಯಕ್ತಿ 12 ಕೋಟಿ ರೂಪಾಯಿಗಳನ್ನು ಲಾಟರಿಯಲ್ಲಿ ಗೆದ್ದಿದ್ದು ತೆರಿಗೆ ಕಡಿತದ ಬಳಿಕ 10.22 ಕೋಟಿ ರೂಪಾಯಿ ಕೈಗೆ ಬಂದಿತ್ತು. ಆದರೆ ಈ ವಿಚಾರವನ್ನು ಆತ ತನ್ನ ಪತ್ನಿ ಲಿನ್ ಗೆ ತಿಳಿಸಿರಲಿಲ್ಲ. ಅಲ್ಲದೆ ಈ ಹಣದ ಪೈಕಿ ತನ್ನ ಸಹೋದರಿಯ ಬ್ಯಾಂಕ್ ಖಾತೆಗೆ 2.42 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದಲ್ಲದೆ, ತನ್ನ ಮಾಜಿ ಪತ್ನಿಗೆ ಫ್ಲ್ಯಾಟ್ ಖರೀದಿಸಲು 84.93 ಲಕ್ಷ ರೂಪಾಯಿಗಳನ್ನು ನೀಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇಗೋ ಈ ವಿಷಯ ಆತನ ಪತ್ನಿಗೆ ತಿಳಿದಿದ್ದು, ಆಕ್ರೋಶಗೊಂಡ ಆಕೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ಇಬ್ಬರು ಜೊತೆಯಾಗಿದ್ದಾಗ ಆತನಿಗೆ ಲಾಟರಿ ಬಹುಮಾನ ಬಂದಿದೆ. ಹೀಗಾಗಿ ತನಗೂ ಪಾಲು ಬೇಕೆಂದು ಪಟ್ಟು ಹಿಡಿದಿದ್ದಳು. ಇದೀಗ ನ್ಯಾಯಾಲಯ ಪತ್ನಿಯ ವಾದವನ್ನು ಎತ್ತಿ ಹಿಡಿದಿದ್ದು, ಲಿನ್ ಗೆ ಗೆದ್ದ ಹಣದಲ್ಲಿ ಶೇಕಡ 60 ಪಾಲು ನೀಡಲು ಆದೇಶಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular