HomeInternationalಯುವಕನ ಕಿಬ್ಬೊಟ್ಟೆ ಎಕ್ಸ್‌ - ರೇ ನೋಡಿ ದಂಗಾದ ವೈದ್ಯರು.....!

ಯುವಕನ ಕಿಬ್ಬೊಟ್ಟೆ ಎಕ್ಸ್‌ – ರೇ ನೋಡಿ ದಂಗಾದ ವೈದ್ಯರು…..!

ಇರಾನಿನ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಲುಕಿದ್ದ 8-ಇಂಚಿನ ಡಿಯೋಡರೆಂಟ್‌ ಅನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿದೆ. ಗುದನಾಳದಲ್ಲಿ ಈ ಕ್ಯಾನ್‌ ಅನ್ನು ಸಿಕ್ಕಿಸಿಕೊಂಡ ವೇಳೆ ಅದು ಆತನ ಹೊಟ್ಟೆಯೊಳಗೆ ಹೋಗಿ ಸೇರಿಕೊಂಡಿದೆ.

ಕಿಬ್ಬೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡ ಬೆನ್ನಿಗೆ ಈತನನ್ನು ಟೆಹ್ರಾನ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲಿಗೆ ಈತ ತಾನು ಏನು ಮಾಡಿದ್ದಾನೆ ಎಂದು ಹೇಳಲು ಹಿಂಜರಿದ ಕಾರಣ ಎಕ್ಸ್-ರೇ ಮಾಡಿದ ವೈದ್ಯರು ಆತನ ಹೊಟ್ಟೆಯಲ್ಲಿ ಡಿಯೋಡರೆಂಟ್ ಕ್ಯಾನ್ ಇರುವುದನ್ನು ಪತ್ತೆ ಮಾಡಿದ್ದಾರೆ.

ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಈತನನ್ನು ಬಳಿಕ ವೈದ್ಯರು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular