ಉಡುಪಿ: ಪಂಪ್ ದುರಸ್ತಿ ಮಾಡಲು ಬಾವಿಗೆ ಇಳಿದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ಸಮೀಪ ವಡೇರಾ ಹೋಬಳಿಯ ಬಿಸಿ ರೋಡ್ ಬಳಿ ನಡೆದಿದೆ.
ವಡೇರಾ ಹೋಬಳಿ ನಿವಾಸಿ ನಾಗರಾಜ್(51) ಮೃತಪಟ್ಟವರು ಎಂದು ಹೇಳಲಾಗಿದೆ. ಮನೆಯ ಬಾವಿಯ ಸಬ್ ಮರ್ಸಿಬಲ್ ಪಂಪ್ ರಿಪೇರಿ ಮಾಡಲು ಬಾವಿಗೆ ನಾಗರಾಜ್ ಅವರು ಇಳಿದಿದ್ದ ವೇಳೆ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

