ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವುಗಳ ಪೈಕಿ ಹಲವು ಪ್ರೇರಣಾದಾಯಕವಾಗಿರುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ಶೇರ್ ಆಗಿದೆ. ಮ್ಯಾನ್‌ಹೋಲ್ ಸುತ್ತಲೂ ಕಾಂಕ್ರೀಟ್ ಹಾಕುವ ವ್ಯಕ್ತಿಯ ವಿಡಿಯೋವನ್ನು ಇವರು ಶೇರ್ ಮಾಡಿದ್ದಾರೆ.
ಮೂಲತಃ ʼಹೌ ಥಿಂಗ್ಸ್ ವರ್ಕ್ʼ ಎಂಬ ಪುಟದಿಂದ ಪೋಸ್ಟ್ ಮಾಡಲಾಗಿದೆ. 27 ಸೆಕೆಂಡುಗಳ ವಿಡಿಯೋದಲ್ಲಿ, ಮ್ಯಾನ್‌ಹೋಲ್ ಸುತ್ತಲೂ ಒಬ್ಬ ವ್ಯಕ್ತಿ ಕಾಂಕ್ರೀಟ್ ಹಾಕುತ್ತಿರುವುದನ್ನು ಕಾಣಬಹುದು. ಅವರು ತಮ್ಮ ಕೆಲಸದಲ್ಲಿ ಹೆಚ್ಚು ಸಮರ್ಪಿತರಾಗಿದ್ದರು ಮತ್ತು ಎಲ್ಲಾ ಹಂತಗಳನ್ನು ನಿಖರವಾಗಿ ಅನುಸರಿಸಿದರು.
ಆನಂದ್ ಮಹೀಂದ್ರಾ ಆ ವ್ಯಕ್ತಿಯ ಕೆಲಸದ ಬಗ್ಗೆ ಸಾಕಷ್ಟು ಪ್ರಭಾವಿತರಾಗಿದ್ದಾರೆ. “ನಿಮ್ಮ ಕೆಲಸ ಚಿಕ್ಕದ್ದೇ ಆಗಿರಲಿ, ಅದು ಮುಖ್ಯವಲ್ಲ, ಬದಲಿಗೆ ನಿಮ್ಮ ಕೆಲಸದಲ್ಲಿ ಗುಣಮಟ್ಟಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೀರಿ ಎನ್ನುವುದು ಮುಖ್ಯ ಎನ್ನುವ ಮೂಲಕ ಈ ಯುವಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಟ್ವಿಟ್ಟರ್ ಬಳಕೆದಾರರು ಕೈಗಾರಿಕೋದ್ಯಮಿಯ ಮಾತನ್ನು ಒಪ್ಪಿಕೊಂಡು ಕಮೆಂಟ್ ಹಾಕುತ್ತಿದ್ದಾರೆ.
Successful results come from unrelenting attention to quality in the smallest details of your work. This man doesn’t need to read any management bibles on the pursuit of excellence. He could teach a course on that himself… #MondayMotivation https://t.co/pEoNVSc0ZK
— anand mahindra (@anandmahindra) January 30, 2023
the beauty is in the tiny details ……. that’s master craftsmanship !
— espresso ☕️ (@singlemaltrocks) January 30, 2023
Excellent!!!
— Prabunandhan (@Prabunandhan10) January 30, 2023

