ನವದೆಹಲಿ : ಆಘಾತಕಾರಿ ಘಟನೆಯೊಂದರಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ದೆಹಲಿಯ ಮಹಾರಾಜ ಸೂರಜ್ಮಲ್ ಸ್ಟೇಡಿಯಂ ಮೆಟ್ರೋ ನಿಲ್ದಾಣದಿಂದ ರಸ್ತೆ ಬದಿಗೆ ಹಾರಿ ಗುರುವಾರ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ ಮೃತನನ್ನು ರೋಹಿಣಿ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಸ್ಥಳದಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ವ್ಯಕ್ತಿಯು ಪ್ಯಾರಾಫೀಟ್ ನ ಮೇಲ್ಭಾಗದಲ್ಲಿ ಕುಳಿತು ನಂತರ ಬ್ಯಾಗ್ ಸಮೇತ ಜಿಗಿಯುವುದನ್ನು ಕಾಣಬಹುದು.
ವರದಿಗಳ ಪ್ರಕಾರ, ಆ ವ್ಯಕ್ತಿಯನ್ನು ತಕ್ಷಣ ಸಿಎಟಿ ಆಂಬ್ಯುಲೆನ್ಸ್ ಮೂಲಕ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
49-year-old man dies by suicide at Delhi's Maharaja Surajmal Stadium Metro Station. The incident happened today at nearly 1.00 pm.
The deceased was identified as Harish, a resident of Rohini in Delhi. No suicide note was recovered from the spot.#Delhi pic.twitter.com/R74VbmiUEV
— Vani Mehrotra (@vani_mehrotra) August 8, 2024

