ಬೆಂಗಳೂರಲ್ಲಿ ಪ್ರತಿನಿತ್ಯ ಕೆಲಸಕ್ಕೆ ಹೋಗುವವರಿಗೆ ಟ್ರಾಫಿಕ್ ಸಮಸ್ಯೆ ದೊಡ್ಡ ತಲೆನೋವಾಗಿದೆ. ಸರಿಯಾದ ಸಮಯಕ್ಕೆ ಕಚೇರಿಗೆ ತೆರಳಲಾಗದೇ ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡೋದು ಕಾಮನ್ ಆಗಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ನಾಗರಿಕರು ತಮ್ಮ ಕಚೇರಿ ಕೆಲಸಗಳನ್ನು ಟ್ರಾಫಿಕ್ ನಲ್ಲಿದ್ದಾಗಲೇ ಮಾಡುವಂಥದ್ದು ಕಾಣುತ್ತೆ. ಇತ್ತೀಚಿಗೆ ಮಹಿಳೆಯೊಬ್ಬರು ರ್ಯಾಪಿಡೋ ಬೈಕ್ ಮೇಲೆ ಕೂತು ಟ್ರಾಫಿಕ್ ನಡುವೆಯೇ ಅವರು ಲ್ಯಾಪ್ ಟಾಪ್ ತೆಗೆದು ಕೆಲಸ ಮಾಡಿದ್ದು ವೈರಲ್ ಆಗಿ ಗಮನ ಸೆಳೆದಿತ್ತು.
ಇದೀಗ ಅಂಥದ್ದೇ ಮತ್ತೊಂದು ಪ್ರಸಂಗ ಬೆಳಕಿಗೆ ಬಂದಿದ್ದು, ವಾಹನ ದಟ್ಟಣೆಯಲ್ಲಿ ಸಿಲುಕಿದ ವ್ಯಕ್ತಿ ರಸ್ತೆಯಲ್ಲೇ ಬೈಕ್ ಮೇಲೆ ಕೂತು ಕಚೇರಿಯ ಆನ್ ಲೈನ್ ಮೀಟಿಂಗ್ ಗೆ ಹಾಜರಾಗಿದ್ದಾರೆ.
ಟ್ರಾಫಿಕ್‌ನಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬರು ಕಚೇರಿ ಮೀಟಿಂಗ್ ಗೆ ಹಾಜರಾಗುತ್ತಿರುವ ಸ್ಯ್ನಾಪ್‌ಶಾಟ್ ವೈರಲ್ ಆಗಿದೆ. ಪೀಕ್ ಹವರ್ ನಲ್ಲಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿದ ವ್ಯಕ್ತಿ ತಮ್ಮ ಪ್ರಯಾಣ ಮತ್ತು ಅವರ ವೃತ್ತಿಪರ ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿಭಾಯಿಸಲು ನಿರ್ಧರಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
https://twitter.com/vaishah01/status/1667029579649929217?ref_src=twsrc%5Etfw%7Ctwcamp%5Etweetembed%7Ctwterm%5E1667029579649929217%7Ctwgr%5E4f34dc074dea363e15a6c73053ec3bd6433fbfd3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fmanattendsmeetingonbikewhilestuckintrafficinpeakbengalurumoment-newsid-n508083414