ಉಡುಪಿ: ಉಡುಪಿ ಜಿಲೆಯ ಮಲ್ಪೆ ಬಂದರಿನಲ್ಲಿ ಬೆಳ್ಳಂ ಬೆಳಿಗ್ಗೆ ಘೋರ ಕೃತ್ಯ ನಡೆದಿದೆ. ಮೀನುಗಾರ ಕಾರ್ಮಿಕನಿಗೆ ದುಷ್ಕರ್ಮಿಯೊಬ್ಬ ಚಾಕು ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ.
ಚಿಕ್ಕಮಗಳೂರು ಮೂಲದ ಅಭಿಷೇಕ್ (24) ಕೊಲೆಯಾದ ದುರ್ದೈವಿ. ರಾಯಚೂರು ಮೂಲದ ಗೋಂವಿಂದ ರಾಜು ಕೊಲೆ ಮಾಡಿರುವ ಆರೋಪಿ. ಮುಂಜಾನೆ ಮಲ್ಪೆ ಬಂದರಿನಲ್ಲಿ ಯುವಕನಿಗೆ ಆರೋಪಿ ಚಾಕು ಇರಿದು ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿಸ್ದಿದ್ದಾರೆ.
ವಿಚಾರಣೆ ವೇಳೆ, ಕುಡಿದ ಮತ್ತಿನಲ್ಲಿ ಆರೋಪಿ ಚಾಕು ಇರಿದಿರುವುದು ಗೊತ್ತಾಗಿದೆ. ಅಭಿಷೇಕ್ ಶ್ರೀ ಮಹಾಕಾಳಿ ಬೋಟ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

