HomeLatest Newsಮಕ್ಕಳಿಗೆ ಮಾಡಿ ಕೊಡಿ ರುಚಿಕರವಾದ ʼಕ್ಯಾರೆಟ್ ಕಾಯಿನ್ʼ

ಮಕ್ಕಳಿಗೆ ಮಾಡಿ ಕೊಡಿ ರುಚಿಕರವಾದ ʼಕ್ಯಾರೆಟ್ ಕಾಯಿನ್ʼ

ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್-1, ಕಡಲೇಹಿಟ್ಟು- 2 ಟೀ ಸ್ಪೂನ್, ಅಕ್ಕಿಹಿಟ್ಟು- ½ ಟೀ ಸ್ಪೂನ್, ಸ್ವಲ್ಪ ಕರಿಮೆಣಸು ಪುಡಿ, ಸ್ವಲ್ಪ ಉಪ್ಪು.

ಮಾಡುವ ವಿಧಾನ: ತುರಿದ ಕ್ಯಾರೆಟ್ ಗೆ ಕಡಲೇ ಹಿಟ್ಟು, ಅಕ್ಕಿ ಹಿಟ್ಟು ಸ್ವಲ್ಪ ಕರಿಮೆಣಸು ಪುಡಿ, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ವ ನೀರು ಬೇಕಿದ್ದರೆ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಕೈಗೆ ಸ್ಪಲ್ಪ ತುಪ್ಪ ಸವರಿಕೊಂಡು ಮಾಡಿರುವಂತಹ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತೆಗೆದುಕೊಂಡು ಕಾಯಿನ್ ತರಹ ಮಾಡಿಟ್ಟುಕೊಳ್ಳಿ.

ಬಳಿಕ ಪ್ಯಾನ್ ಗೆ ತುಪ್ಪ ಸವರಿ ಬಿಸಿಯಾದ ಕೂಡಲೇ ಈ ಕಾಯಿನ್ ಗಳನ್ನು ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ 5 ರಿಂದ 6 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಎರಡೂ ಕಡೆ ಚೆನ್ನಾಗಿ ಫ್ರೈ ಮಾಡಿದರೆ ಮಕ್ಕಳಿಗಾಗಿ ರುಚಿಕರವಾದ ಕ್ಯಾರೆಟ್ ಕಾಯಿನ್ ಸವಿಯಲು ಸಿದ್ಧ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular