HomeRecipiesಉಪಹಾರಕ್ಕೆ ಮಾಡಿ ಸವಿಯಿರಿ ಆರೋಗ್ಯಕರ ಬ್ರೊಕೊಲಿ ಸಲಾಡ್

ಉಪಹಾರಕ್ಕೆ ಮಾಡಿ ಸವಿಯಿರಿ ಆರೋಗ್ಯಕರ ಬ್ರೊಕೊಲಿ ಸಲಾಡ್

ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್ ತಯಾರಿಸಬಹುದು.

ಇದು ಆರೋಗ್ಯಕ್ಕೆ ಒಳ್ಳೆಯದು. ಈ ಸಲಾಡ್ ಮಾಡುವುದು ಬಹಳ ಸುಲಭ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ :

½ ಕಪ್ ಬ್ರೊಕೊಲಿ

¼ ಕಪ್ ಬೇಯಿಸಿದ ಆಲೂಗಡ್ಡೆ

2 ಚಮಚ ಹುರಿದ ಕಡಲೆ

2 ಚಮಚ ಚೀಸ್

¼ ಚಮಚ ಕಾಳು ಮೆಣಸು

1 ಚಮಚ ಪುದೀನಾ ಎಲೆ

1 ಚಮಚ ಕೊತ್ತಂಬರಿ ಎಲೆ

2 ಚಮಚ ನಿಂಬೆ ರಸ

1 ಚಮಚ ಮೇಯನೇಸ್

ರುಚಿಗೆ ತಕ್ಕಷ್ಟು ಉಪ್ಪು

ಸಲಾಡ್ ಮಾಡುವ ವಿಧಾನ :

ಒಂದು ಪಾತ್ರೆಗೆ ಬ್ರೊಕೊಲಿ ಹಾಕಿ ಗ್ಯಾಸ್ ಮೇಲಿಡಿ. ಬ್ರೊಕೊಲಿ ಸ್ವಲ್ಪ ಫ್ರೈ ಆದ್ಮೇಲೆ ಅದಕ್ಕೆ ಉಳಿದ ಎಲ್ಲವನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ ಸ್ವಲ್ಪ ಸಮಯದ ನಂತ್ರ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular