HomeBeautyತೂಕ ಇಳಿಸಿಕೊಳ್ಳಲು ಸೌತೆಕಾಯಿ ಸಲಾಡ್ ಮಾಡಿ ತಿನ್ನಿ

ತೂಕ ಇಳಿಸಿಕೊಳ್ಳಲು ಸೌತೆಕಾಯಿ ಸಲಾಡ್ ಮಾಡಿ ತಿನ್ನಿ

ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಈಗ ಹೆಚ್ಚಿನವರು ಸಲಾಡ್ ಮೊರೆ ಹೋಗುತ್ತಾರೆ. ಸಂಜೆ ಸಮಯದಲ್ಲಿ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಸುಲಭವಾಗಿ ಮಾಡುವ ಸೌತೆಕಾಯಿ ಸಲಾಡ್ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

¾ ಕಪ್- ಮಯೋನಿಸ್, ¼ ಕಪ್-ಕ್ರೀಂ, 1 ಟೇಬಲ್ ಸ್ಪೂನ್-ಕೆಂಪು ವಿನೇಗರ್, 1 ಟೀ ಸ್ಪೂನ್-ಆಲಿವ್ ಎಣ್ಣೆ, 2-ಎಸಳು ಬೆಳ್ಳುಳ್ಳಿ, ½ ಟೀ ಸ್ಪೂನ್-ಉಪ್ಪು, ¼ ಟೀ ಸ್ಪೂನ್-ಕಾಳುಮೆಣಸಿನ ಪುಡಿ, 1 ಚಿಟಿಕೆ-ಸಕ್ಕರೆ, 3-ಸೌತೆಕಾಯಿ, 1-ಈರುಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಮಯೋನಿಸ್, ಕ್ರೀಂ, ವಿನೇಗರ್, ಆಲಿವ್ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನು ಒಂದು ಗಂಟೆ ಹೊತ್ತು ಫ್ರಿಡ್ಜ್ ನಲ್ಲಿಡಿ. ನಂತರ ಈರುಳ್ಳಿ ಹಾಗೂ ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಇದನ್ನು ಈಗಾಗಲೇ ಸಿದ್ಧ ಮಾಡಿಟ್ಟುಕೊಂಡ ಮಯೋನಿಸ್ ಮಿಶ್ರಣಕ್ಕೆ ಹಾಕಿ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular