HomeRecipiesತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೆ ಮಾಡಿ ಕೊಡಿ ಆರೋಗ್ಯಕರ ಪೇಯ

ತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೆ ಮಾಡಿ ಕೊಡಿ ಆರೋಗ್ಯಕರ ಪೇಯ

ಬೆಳ್ಳಂಬೆಳಗ್ಗೆ ಶಾಲೆಗೆ ಓಡುವ ಪುಟಾಣಿಗಳು ಸರಿಯಾಗಿ ತಿಂಡಿ ತಿನ್ನುವುದೇ ಇಲ್ಲ ಎಂಬ ಚಿಂತೆ ಎಲ್ಲಾ ಪೋಷಕರದ್ದು. ತಮ್ಮ ಮಕ್ಕಳು ದಿನದಿಂದ ದಿನಕ್ಕೆ ಸರಿಯಾದ ಆಹಾರ, ಪೋಷಣೆ ಇಲ್ಲದೆ ಸೊರಗುತ್ತಿದ್ದಾರೆ ಎಂಬ ಕೊರಗು ನಿಮಗಿದ್ದರೆ, ಈ ಪೇಯ ಮಾಡಿ ಕೊಡಿ.

ಬೇಕಾಗುವ ಪದಾರ್ಥಗಳು
ಬಾದಾಮಿ – 100ಗ್ರಾಂ
ಗೋಡಂಬಿ – 100 ಗ್ರಾಂ
ಒಣ ಖರ್ಜೂರ – 100 ಗ್ರಾಂ
ಅಕ್ರೂಟ್ – 100 ಗ್ರಾಂ
ಯಾಲಕ್ಕಿ – 8-10
ಕೆಂಪು ಕಲ್ಲು ಸಕ್ಕರೆ – 200 ಗ್ರಾಂ
ಕಡಲೇ ಬೀಜ – 50 ಗ್ರಾಂ
ಕರಬೂಜ ಮತ್ತು ಕಲ್ಲಂಗಡಿ ಬೀಜ – 100 ಗ್ರಾಂ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲ್ಲು ಸಕ್ಕರೆ ಒಂದನ್ನು ಬಿಟ್ಟು, ಮಿಕ್ಕ ಎಲ್ಲವನ್ನೂ ಮಂದ ಉರಿಯಲ್ಲಿ ತುಪ್ಪದಲ್ಲಿ ಹುರಿದು, ತಣಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಕಲ್ಲು ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿ, ಹಾಲಿನೊಂದಿಗೆ ಬೆರೆಸಿ ಬೆಳಗ್ಗೆ ಮತ್ತು ಸಂಜೆ ನಿಮ್ಮ ಮಕ್ಕಳಿಗೆ ಕುಡಿಯಲು ಕೊಡಿ. ಒಣ ಹಣ್ಣುಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಮಕ್ಕಳ ಬೆಳವಣಿಗೆಗೆ ಪೂರಕ ಆಹಾರವಾಗಿ ಕೆಲಸ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular