ಏಕಕಾಲಕ್ಕೆ 2 ವಿಮಾನಗಳ ಲ್ಯಾಂಡಿಂಗ್, ಟೇಕಾಫ್ ಗೆ ಸೂಚನೆ: ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದೇ ಸಮಯಕ್ಕೆ 2 ವಿಮಾನಗಳ ಟೇಕ್‌ ಆಫ್, ಲ್ಯಾಂಡಿಂಗ್ ಗೆ ಸೂಚನೆ ನೀಡಿದ್ದು, ಅದೃಷ್ಟವಶಾತ್ ದೊಡ್ಡ ಅಪಘಾತ ತಪ್ಪಿದೆ.

ಬುಧವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್‌ ಲೈನ್ಸ್‌ ನ ಎರಡು ವಿಮಾನಗಳಿಗೆ ಏಕಕಾಲದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್ ಆಫ್‌ಗೆ ಅನುಮತಿ ನೀಡಿದ್ದು, ಸಮಯಪ್ರಜ್ಞೆಯಿಂದ ಭಾರೀ ಅವಘಡವೊಂದು ತಪ್ಪಿದೆ. ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಸೂಚನೆಗಳ ನಂತರ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಲಾಗಿದೆ.

ವಿಮಾನಯಾನ ನಿಯಂತ್ರಕ ಡಿಜಿಸಿಎ ಘಟನೆಯ ಕುರಿತು ತನಿಖೆ ನಡೆಸಲಿದೆ. ದೆಹಲಿಯಿಂದ ಬಾಗ್ಡೋಗ್ರಾಕ್ಕೆ ಯುಕೆ 725 ವಿಮಾನವು ಹೊಸದಾಗಿ ಉದ್ಘಾಟನೆಗೊಂಡ ರನ್‌ವೇಯಿಂದ ಟೇಕ್ ಆಫ್ ಆಗಲು ರನ್‌ ವೇಯ ಕೊನೆಯಲ್ಲಿ ಚಲಿಸುವಾಗ, ಅಹಮದಾಬಾದ್‌ನಿಂದ ದೆಹಲಿಗೆ ಮತ್ತೊಂದು ವಿಸ್ತಾರಾ ವಿಮಾನವು ಸಮಾನಾಂತರ ರನ್‌ವೇಯಲ್ಲಿ ಇಳಿದ ನಂತರ ಈ ಘಟನೆ ಸಂಭವಿಸಿದೆ.

ಎರಡಕ್ಕೂ ಒಂದೇ ಸಮಯದಲ್ಲಿ ಅನುಮತಿ ನೀಡಲಾಯಿತು. ಆದರೆ, ಎಟಿಸಿ ತಕ್ಷಣವೇ ನಿಯಂತ್ರಣವನ್ನು ತೆಗೆದುಕೊಂಡಿತು. ಕರ್ತವ್ಯದಲ್ಲಿದ್ದ ಎಟಿಸಿ(ಏರ್ ಟ್ರಾಫಿಕ್ ಕಂಟ್ರೋಲ್) ಅಧಿಕಾರಿ ವಿಸ್ತಾರಾ ವಿಮಾನವನ್ನು ಟೇಕ್-ಆಫ್ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿದ್ದ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಟೇಕ್-ಆಫ್ ಸ್ಥಗಿತಗೊಳಿಸಿದ ನಂತರ, ದೆಹಲಿ-ಬಾಗ್ಡೋಗ್ರಾ ವಿಮಾನವು ಸಕ್ರಿಯ ರನ್‌ವೇಯಿಂದ ಪಾರ್ಕಿಂಗ್ ಬೇಗೆ ಮರಳಿತು.

ಘಟನೆಯ ಬಗ್ಗೆ ಮಾತನಾಡಿರುವ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು, ಸರಿಯಾದ ಸಮಯಕ್ಕೆ ವಿಮಾನ ಟೇಕಾಫ್ ಅನ್ನು ನಿಲ್ಲಿಸದಿದ್ದರೆ, ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read