HomeSpecialʼಈರುಳ್ಳಿ ಸಿಪ್ಪೆ' ಎಸೆಯುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ʼಈರುಳ್ಳಿ ಸಿಪ್ಪೆ’ ಎಸೆಯುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಈರುಳ್ಳಿ, ಅಡುಗೆಗೆ ರುಚಿ ಕೊಡುವ ಜೊತೆ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸಿಪ್ಪೆಯಿಂದಲೂ ಗಂಟಲಿನ ಸೋಂಕನ್ನು ನಿವಾರಣೆ ಮಾಡಬಹುದು ಎಂಬುದು ನಿಮಗೆ ಗೊತ್ತೇ…?

ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹತ್ತು ನಿಮಿಷ ಬಿಡಿ. ಬಳಿಕ ಅದೇ ನೀರಿನಿಂದ ಬಾಯಿ ಮುಕ್ಕಳಿಸಿ. ಅಥವಾ ಆ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ ಇದರಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಲುಗಳಲ್ಲಿ ಸೆಳೆತ, ನೋವು ಆಗುತ್ತಿದ್ದರೆ ನೀವು ಈರುಳ್ಳಿ ಸಿಪ್ಪೆಯನ್ನು ಈ ರೀತಿಯಲ್ಲಿ ಬಳಸಿಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಸಿಪ್ಪೆ ಹಾಕಿ. ಈ ನೀರನ್ನು ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ಕುದಿಸಿ ಇದರಲ್ಲಿ ಕಾಲು ಇಟ್ಟುಕೊಳ್ಳಿ.

ಈರುಳ್ಳಿ ಸಿಪ್ಪೆಗಳು ಗಿಡಗಳ ಬೆಳವಣಿಗೆಯಲ್ಲಿ ಫರ್ಟಿಲೈಸರ್ ಆಗಿ ಕೆಲಸ ಮಾಡುತ್ತವೆ. ಈರುಳ್ಳಿ ಸಿಪ್ಪೆ ನೆನೆಸಿಟ್ಟ ನೀರನ್ನು ಒಂದು ದಿನದ ಬಳಿಕ ಗಿಡದ ಬುಡಕ್ಕೆ ಸುರಿಯಿರಿ. ವಾರದಲ್ಲಿ ಒಂದು ಬಾರಿ ಈ ರೀತಿ ಮಾಡಿ. ಇದರಿಂದ ಗಿಡಗಳಿಗೆ ಫರ್ಟಿಲೈಜರ್ ದೊರೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular