HomeAutoದುಬಾರಿ ಬೆಲೆಯ ರೇಂಜ್ ರೋವರ್ ಕಾರ್ ಖರೀದಿಸಿದ ನಟ ಮಹೇಶ್ ಬಾಬು

ದುಬಾರಿ ಬೆಲೆಯ ರೇಂಜ್ ರೋವರ್ ಕಾರ್ ಖರೀದಿಸಿದ ನಟ ಮಹೇಶ್ ಬಾಬು

ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ತೆಲುಗು ಸಿನಿ ಉದ್ಯಮದ ಶ್ರೀಮಂತ ನಟರ ಪಟ್ಟಿಯಲ್ಲಿದ್ದಾರೆ. ಐಷಾರಾಮಿ ಜೀವನ ನಡೆಸುವ ಅವರು ಹಲವು ಕಾರುಗಳಿಂದ ತುಂಬಿದ ಗ್ಯಾರೇಜ್ ಅನ್ನು ಹೊಂದಿದ್ದಾರೆ. ಇದೀಗ ಈ ಗ್ಯಾರೇಜ್‌ಗೆ ಮತ್ತೊಂದು ಹೊಸ ದುಬಾರಿ ಕಾರು ಸೇರ್ಪಡೆಯಾಗಿದೆ.

ಮಹೇಶ್ ಬಾಬು ಇತ್ತೀಚೆಗೆ ಹೊಸ ರೇಂಜ್ ರೋವರ್ ಎಸ್‌ಯುವಿ ಕಾರ್ ಖರೀದಿಸಿದ್ದಾರೆ. ಇದರ ಬೆಲೆಗೆ ಬೆಂಗಳೂರಲ್ಲಿ ಒಂದು ಅಪಾರ್ಟ್ ಮೆಂಟ್ ಕೊಂಡುಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ ಗಳ ಬಗ್ಗೆ ಕ್ರೇಜ್ ಹೊಂದಿರುವ ಮಹೇಶ್ ಬಾಬು ಗೋಲ್ಡ್ ಕಲರ್ ರೇಂಜ್ ರೋವರ್ ಕಾರ್ ಖರೀದಿಸಿದ್ದು ಇದರ ಬೆಲೆ ಬರೋಬ್ಬರಿ 5.4 ಕೋಟಿ ರೂ. ಎಂದು ಹೇಳಲಾಗಿದೆ.

ರೇಂಜ್ ರೋವರ್ ಸೆಲೆಬ್ರಿಟಿಗಳ ನೆಚ್ಚಿನ ಕಾರು ಆಗಿದ್ದು ಈಗಾಗಲೇ ಮೋಹನ್ ಲಾಲ್, ಜೂನಿಯರ್ ಎನ್ ಟಿ ಆರ್, ಚಿರಂಜೀವಿ ಬಳಿ ಈ ದುಬಾರಿ ಕಾರ್ ಇದೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಲ್ಲಿ ಚಿನ್ನದ ಬಣ್ಣದ ರೇಂಜ್ ರೋವರ್ ಹೊಂದಿರುವ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮಹೇಶ್ ಬಾಬು ಪಾತ್ರರಾಗಿದ್ದಾರೆ.

ಮಹೇಶ್ ಬಾಬು ಅವರು ಸದ್ಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ‘ಗುಂಟೂರ್ ಖಾರಂ’ ಎಂಬ ಮುಂಬರುವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular