HomeIndiaಮಹಾರಾಷ್ಟ್ರದಲ್ಲಿ ಯುವಕನಿಂದ 180 ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ: ಮತ್ತೋರ್ವ...

ಮಹಾರಾಷ್ಟ್ರದಲ್ಲಿ ಯುವಕನಿಂದ 180 ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ: ಮತ್ತೋರ್ವ ಆರೋಪಿ ಅರೆಸ್ಟ್

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಾರಣಕ್ಕೆ ಸಂಬಂಧಿ೮ಸಿದಂತೆ ಅಪ್ರಾಪ್ತ ಸಂತ್ರಸ್ತೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಸಂತ್ರಸ್ತೆ ಆತ್ಮಹತ್ಯೆಗಾಗಿ ವಝರ್ ಅಣೆಕಟ್ಟಿಗೆ ಬಂದಿದ್ದಳು. ಇದನ್ನು ಗಮನಿಸಿದ ಪೊಲೀಸರು ಅವಳನ್ನು ರಕ್ಷಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಬಂಧನಕ್ಕೊಳಗಾಗಿರುವ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂಬಾತನಿಂದ ಬಾಲಕಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಈ ಬಾಲಕಿ ಮಾತ್ರವಲ್ಲದೇ ಸುಮಾರು 180 ಬಾಲಕಿಯರ ಮೇಲೆ ಆರೋಪಿ ದೌರ್ಜನ್ಯ ಎಸಗಿ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂಬುದು ಬಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ದೌರ್ಜನ್ಯದ ವಿಡಿಯೋಗಳು ವೈರಲ್‌ ಆದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಬಂಧಿತನ ಮೊಬೈಲ್‌ನಲ್ಲಿ ಆತ ರೆಕಾರ್ಡ್‌ ಮಾಡಿದ್ದ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು. ಇಲ್ಲಿಯವರೆಗೆ ಎಂಟು ಮಂದಿ ಸಂತ್ರಸ್ತೆಯರು ಅಯಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಂದೆಡೆ ಪೊಲೀಸರು ನಾಗ್ಪುರದ 15 ವರ್ಷದ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಮತ್ತೊಬ್ಬ 16 ವರ್ಷದ ಬಾಲಕಿಯ ತಾಯಿಯಿಂದ ದೂರು ದಾಖಲಿಸಿಕೊಂಡಿದ್ದಾರೆ. ದೂರಿನ ಅನ್ವಯ ಪೋಕ್ಸೋ ಕೇಸ್‌ ದಾಖಲಿಸಿಕೊಂಡು ಅಯಾಜ್‌ನ ಸ್ನೇಹಿತ ಉಜೈರ್ ಖಾನ್‌ ಎಂಬಾತನನ್ನು ಕೂಡ ಬಂಧಿಸಲಾಗಿದೆ.

ಆಯಾಜ್ ಮತ್ತು ಉಜೈರ್ ಖಾನ್ ನಡುವಿನ ವಿವಾದದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಯಾಜ್ ತನ್ನ ಫೋನ್‌ನ್ನು ಅಂಗಡಿಯಲ್ಲಿ ಬಿಟ್ಟು ಹೋಗಿದ್ದಾಗ, ಅದರಲ್ಲಿದ್ದ ಸಂತ್ರಸ್ತೆಯರ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಉಜೈರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇಲ್ಲಿಯವರೆಗೆ ಪೊಲೀಸರು ಎಂಟು ಶಂಕಿತರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಏಳು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಮತ್ತು ಟ್ಯಾಬ್ಲೆಟ್ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ಅಯಾಜ್ ಹುಡುಗಿಯರನ್ನು ಸ್ನೇಹಿತನ ಮನೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಸ್ನೇಹಿತನ ಮನೆ ಬಳಸಿಕೊಂಡಿದ್ದಕ್ಕೆ ಆತನಿಗೆ ಪ್ರತಿ ಬಾರಿ 500 ರೂ.ಗಳನ್ನು ನೀಡುತ್ತಿದ್ದನಂತೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular