HomeLatest NewsBREAKING: ಸೇತುವೆ ಕುಸಿದು ದುರಂತ: 6 ಪ್ರವಾಸಿಗರು ಸಾವು; ನೀರಿನಲ್ಲಿ ಕೊಚ್ಚಿಹೋದ ಹಲವರು

BREAKING: ಸೇತುವೆ ಕುಸಿದು ದುರಂತ: 6 ಪ್ರವಾಸಿಗರು ಸಾವು; ನೀರಿನಲ್ಲಿ ಕೊಚ್ಚಿಹೋದ ಹಲವರು

ಮುಂಬೈ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ನಡುವೆ ಸೇತುವೆಯೊಂದು ಕುಸಿದುಬಿದ್ದ ಪರಿಣಾಮ 6 ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಪುಣೆಯ ಕುಂಡಮ್ಲಾದಲ್ಲಿ ಇಂದ್ರಯಾಣಿ ನದಿಗೆ ನಿರ್ಮಿಸಿದ್ದ ಸೇತುವೆ ಕುಸಿದು ಈ ದುರಂತ ಸಂಭವಿಸಿದೆ. ಪುರಾತನ ಕಾಲದ ಸೇತುವೆ ಇದಾಗಿದ್ದು, ಧಾರಾಕಾರವಾಗಿ ಸುರಿದ ಮಳೆಗೆ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಇನ್ನೂ 20-25 ಪ್ರವಾಸಿಗರು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಸದ್ಯ ೬ ಪ್ರವಾಸಿಗರ ಮೃತದೇಹ ನೀರಿಂದ ಹೊರತೆಗೆಯಲಾಗಿದೆ. ಭಾನುವಾರವಾದ್ದರಿಂದ ಅಪಾರ ಸಂಖ್ಯೆಯಲ್ಲಿ ಇಂದ್ರಯಾಣಿ ನದಿ ಸೇತುವೆಗೆ ಬಂದಿದರು. ಈ ವೇಳೆ ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular