HomeLatest NewsSHOCKING: ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ತಲೆಗೆ ಹೊಡೆದು ತಾಯಿಯನ್ನೇ ಕೊಂದ ಪುತ್ರ

SHOCKING: ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ತಲೆಗೆ ಹೊಡೆದು ತಾಯಿಯನ್ನೇ ಕೊಂದ ಪುತ್ರ

ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯೊಬ್ಬನ್ನು ಅಡುಗೆ ಮಾಡದ ಕಾರಣಕ್ಕೆ ತಾಯಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಮೇ 24 ರಂದು ರಾತ್ರಿ ಥಾಲ್ನರ್ ಪ್ರದೇಶದ ವಾಥೋಡ್ ಗ್ರಾಮದಲ್ಲಿ ನಡೆದಿದೆ. ತಿಪಾಬಾಯಿ ಪವಾರ(65) ಕೊಲೆಯಾದವರು. ತನ್ನ ಮಗ ಅವ್ಲೇಶ್‌ ಗೆ ಮೀನಿನ ಊಟ ತಯಾರಿಸಿ ತಮ್ಮ ಗುಡಿಸಲಿನಲ್ಲಿ ಮಲಗಲು ಹೋಗಿದ್ದರು. ಮೀನಿನ ವಾಸನೆಯಿಂದ ಬಂದ ಬೀದಿ ನಾಯಿಯೊಂದು ಮನೆಗೆ ನುಗ್ಗಿ ಊಟ ಹಾಳು ಮಾಡಿತ್ತು.

ಮದ್ಯಪಾನ ಮಾಡಿದ್ದ ಅವ್ಲೇಶ್ ತಡವಾಗಿ ಮನೆಗೆ ಮರಳಿದ್ದಾನೆ. ಊಟ ಸರಿಯಲ್ಲ ಬೇರೆ ಅಡುಗೆ ಮಾಡು ಎಂದು ತಾಯಿಗೆ ಹೇಳಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಲಗಿದ್ದ ತಿಪಾಬಾಯಿ ಪ್ರತಿಕ್ರಿಯಿಸದಿದ್ದಾಗ, ಕೋಪಗೊಂಡು ಮರದ ಕೋಲಿನಿಂದ ಆಕೆಯ ತಲೆಯ ಮೇಲೆ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಎಚ್ಚರವಾದಾಗ ಅವ್ಲೇಶ್ ತನ್ನ ತಾಯಿ ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಸಂಬಂಧಿಕರಿಗೆ ಕರೆ ಮಾಡಿದ್ದಾನೆ, ಅವರು ಸ್ಥಳಕ್ಕೆ ಧಾವಿಸಿದಾಗ ವೃದ್ಧ ಮಹಿಳೆ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿರುವುದು ಕಂಡುಬಂದಿತು. ಸುದ್ದಿ ತಿಳಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಅವ್ಲೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

ಥಾಲ್ನರ್ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular