HomeIndiaಬೆಟ್ಟದ ತುದಿಯಲ್ಲಿ ನಿಂತು ಸಾಯುವುದಾಗಿ ಹೇಳುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಸಾವು; ಘಟನೆ ಕಂಡು...

ಬೆಟ್ಟದ ತುದಿಯಲ್ಲಿ ನಿಂತು ಸಾಯುವುದಾಗಿ ಹೇಳುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಸಾವು; ಘಟನೆ ಕಂಡು ಬೆಟ್ಟದಿಂದ ಜಿಗಿದು ತಾಯಿಯೂ ಆತ್ಮಹತ್ಯೆ

ಮುಂಬೈ: ಯುವಕನೊಬ್ಬನ ದುಡುಕಿನ ನಿರ್ಧಾರಕ್ಕೆ ಆತನ ಇಡೀ ಕುಟುಂಬವೇ ದುರಂತ ಅಂತ್ಯ ಕಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದ ಬೆಟ್ಟದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಖೆವ್ಡಾ ಬೆಟ್ಟವೇರಿದ್ದ ಮಗನನ್ನು ರಕ್ಷಿಸಲೆಂದು ಹೋಗಿ ತಂದೆಯೂ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದರೆ, ಮಗ ಹಾಗೂ ಪತಿಯ ಸಾವನ್ನು ಕಣ್ಣಾರೆ ಕಂಡ ತಾಯಿ ಕ್ಷಣದಲ್ಲೇ ಅದೇ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ನಡೆದಿದೆ.

ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದ ಖೆವ್ಡಾ ಬೆಟ್ಟದಲ್ಲಿ ದೇವ್ಲಾಯಿ ಪ್ರದೇಶದ ನಿವಾಸಿ 18 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ದುಡುಕಿನ ನಿರ್ಧಾರ ತೆಗೆದುಕೊಂಡು ಬೆಟ್ಟದ ತುದಿಯಲ್ಲಿ ನಿಂತಿದ್ದ. ವಿಷಯ ತಿಳಿದ ತಂದೆ-ತಾಯಿ ಹಾಗೂ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಮಗನ ಮನವೊಲಿಕೆಗೆ ಯತ್ನಿಸಿದ್ದಾರೆ. ಬೆಟ್ಟದ ಕೆಳಗೆ ನಿಂತು ಸತತ ಮೂರು ಗಂಟೆಗಳ ಕಾಲ ಮಗನಿಗೆ ದುಡುಕಬೇಡ ಬೆಟ್ಟದಿಂದ ಹಿಂತಿರುಗುವಂತೆ ಮನವಿ ಮಾಡಿದ್ದಾರೆ. ತಂದೆ-ತಾಯಿ, ಭವಿಷ್ಯದ ಬಗ್ಗೆ ಸ್ವಲ್ಪ ವಿಚಾರ ಮಾಡು ವಾಪಸ್ ಬರುವಂತೆ ಹೇಳಿದ್ದಾರೆ. ಆದಾಗ್ಯೂ ಯುವಕ ತನ್ನ ಹಠ ಬಿಟ್ಟಿಲ್ಲ. ಬೆಟ್ಟದ ತುದಿಗೆ ಹೋಗಿ ನಿಂತಿದ್ದಾನೆ.

ಬೇರೆ ದಾರಿ ಕಾಣದೇ ಯುವಕನ ತಂದೆ ಹೇಗಾದರೂ ಮಾಡಿ ಮಗನನ್ನು ರಕ್ಷಿಸಬೇಕು ಎಂದು ತಾವೂ ಬೆಟ್ಟ ಹತ್ತಿ ಹೋಗಿದ್ದಾರೆ. ಯುವಕನ ತಾಯಿಯೂ ಪತಿಯ ಹಿಂದೆ ಸಾಗಿದ್ದಾರೆ. ಮಗನ ಮನವೊಲಿಕೆಗೆ ಯತ್ನಿಸಿದ್ದಾರೆ. ಬೆಳಿಗ್ಗೆಯಿಂದ ಮನವೊಲಿಸಿದರೂ ಯುವಕ ಮನಸ್ಸು ಬದಲಿಸಿಲ್ಲ. ಮಧ್ಯಾಹ್ನ ಸುಮಾರು 1 ಗಂಟೆಗೆ, ಯುವಕನ ತಂದೆ ಮಗನನ್ನು ಬೆಟ್ಟದ ತುದಿಯಿಂದ ದೂರ ಎಳೆಯಲೆಂದು ಕೈಚಾಚಿ ಮಗನ ಹಿಡಿಯುವಷ್ಟರಲ್ಲಿ ಮಗ ಬೆಟ್ಟದಿಂದ ಜಿಗಿದೇ ಬಿಟ್ಟಿದ್ದಾರೆ. ಸಮತೋಲನ ಕಳೆದುಕೊಂಡ ತಂದೆ ಕೂಡ ಮಗನ ಹಿಂದೆಯೇ ಬೆಟ್ಟದಿಂದ ಪ್ರಪಾತಕ್ಕೆ ಬಿದ್ದಿದ್ದಾರೆ. ಈ ದೃಶ್ಯವನ್ನು ಕಣ್ಣಾರೆ ಕಂಡ ತಾಯಿ ಕೆಲವೇ ಕ್ಷಣಗಳಲ್ಲಿ ತಾನೂ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಟ್ಟದ ಮೇಲಿಂದ ಕಣಿವೆಗೆ ಬಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೂರಾರು ಗ್ರಾಮಸ್ಥರು, ಪೊಲೀಸರ ಮುಂದೆಯೇ ಈ ದುರಂತ ಸಂಭವಿಸಿದೆ. ಸ್ಥಳೀಯರ ಮೊಬೈಲ್ ನಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular