HomeLatest Newsಮಹಾರಾಜ ಟ್ರೋಫಿ 2026 ಹರಾಜು: ಮನೀಶ್ ಪಾಂಡೆಗಿಂತಲೂ ಈ ಮೂವರು ಆಟಗಾರರು ಹೆಚ್ಚು ಮೊತ್ತಕ್ಕೆ ಸೇಲ್;...

ಮಹಾರಾಜ ಟ್ರೋಫಿ 2026 ಹರಾಜು: ಮನೀಶ್ ಪಾಂಡೆಗಿಂತಲೂ ಈ ಮೂವರು ಆಟಗಾರರು ಹೆಚ್ಚು ಮೊತ್ತಕ್ಕೆ ಸೇಲ್; ಇಲ್ಲಿದೆ ಅತಿಹೆಚ್ಚು ಹಣಕ್ಕೆ ಬಿಕರಿಯಾದ ಆಟಗಾರರ ಪಟ್ಟಿ

ನಿನ್ನೆ ( ಜೂನ್ 5 ) ಮುಂಬರುವ ಮಹಾರಾಜ ಟ್ರೋಫಿ 2026ರ ಸಲುವಾಗಿ ಬೆಂಗಳೂರಿನಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಿತು. ಈ ಬಾರಿ ಒಟ್ಟು ಆರು ತಂಡಗಳು ಟ್ರೋಫಿಗಾಗಿ ಸೆಣಸಾಡಲಿದ್ದು, ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟುವ ನಿಟ್ಟಿನಿಂದ ಸಿದ್ಧ ಯೋಜನೆಗಳೊಂದಿಗೆ ಆಟಗಾರರನ್ನು ಜಾಣ್ಮೆಯಿಂದ ಆರಿಸಲು ಮುಂದಾದವು.

ಒಟ್ಟು 150 ಆಟಗಾರರ ಹರಾಜು ನಡೆದಿದ್ದು, ತಂಡಗಳು ತಮಗೆ ಬೇಕಾದ ಆಟಗಾರರ ಖರೀದಿಯನ್ನು ಮಾಡಿ ಮುಗಿಸಿವೆ. ಇನ್ನು ಕೆಎಲ್ ರಾಹುಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಸಲುವಾಗಿ ಕೆಎಲ್ ರಾಹುಲ್ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಕಾರಣ ಯಾವ ಫ್ರಾಂಚೈಸಿಗಳು ಅವರನ್ನು ಖರೀದಿ ಮಾಡಲಿಲ್ಲ.

ಕೆಎಲ್ ರಾಹುಲ್ ಎಲ್ಲ ಆಟಗಾರರಿಗಿಂತ ಹೆಚ್ಚಿನ ಬೆಲೆಗೆ ಬಿಕರಿಯಾಗಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಆದರೆ ಕೆಎಲ್ ರಾಹುಲ್ ಟೂರ್ನಿಗೆ ಅಲಭ್ಯರಾದ ಕಾರಣ ಈ ಬಾರಿ ಕರುಣ್ ನಾಯರ್ ಅತಿಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಸ್ಟಲ್ ಕಿಂಗ್ಸ್ ಮಂಗಳೂರು ಕರುಣ್ ನಾಯರ್‌ ಅವರನ್ನು 18 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ್ದು, ಇದು ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತವಾಗಿದೆ. ಈ ಬಾರಿ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ ಆಟಗಾರರ ಪಟ್ಟಿ ಇಲ್ಲಿದೆ.

ಕರುಣ್ ನಾಯರ್ – ₹18 ಲಕ್ಷ (ಕೋಸ್ಟಲ್ ಕಿಂಗ್ಸ್ ಮಂಗಳೂರು)

ಆರ್. ಸ್ಮರಣ್ – ₹15.75 ಲಕ್ಷ (ಶಿವಮೊಗ್ಗ ಯೋಧಾಸ್)

ಅಭಿನವ್ ಮನೋಹರ್ – ₹13.50 ಲಕ್ಷ (ಹುಬ್ಬಳ್ಳಿ ಟೈಗರ್ಸ್)

ಮನೀಷ್ ಪಾಂಡೆ – ₹12.75 ಲಕ್ಷ (ಗುಲ್ಬರ್ಗಾ ಮಿಸ್ಟಿಕ್ಸ್)

ಮ್ಯಾಕ್‌ನೀಲ್ ನೊರೊನ್ಹಾ – ₹12.25 ಲಕ್ಷ (ಗುಲ್ಬರ್ಗಾ ಮಿಸ್ಟಿಕ್ಸ್)

ಎಲ್.ಆರ್. ಚೇತನ್ – ₹11.50 ಲಕ್ಷ (ಮೈಸೂರು ವಾರಿಯರ್ಸ್)

ಮಯಾಂಕ್ ಅಗರ್ವಾಲ್ – ₹11.50 ಲಕ್ಷ (ಹುಬ್ಬಳ್ಳಿ ಟೈಗರ್ಸ್)

ಶುಭಾಂಗ್ ಹೆಗ್ಡೆ – ₹11 ಲಕ್ಷ (ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್)

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular