HomeIndiaBREAKING NEWS: ಮಹಾಕುಂಭ ಮೇಳದಿಂದ ವಾಪಾಸ್ ಆಗುವಾಗ ಹೃದಯಾಘಾತ: ಮತ್ತೋರ್ವ ಕನ್ನಡಿಗ ಸಾವು

BREAKING NEWS: ಮಹಾಕುಂಭ ಮೇಳದಿಂದ ವಾಪಾಸ್ ಆಗುವಾಗ ಹೃದಯಾಘಾತ: ಮತ್ತೋರ್ವ ಕನ್ನಡಿಗ ಸಾವು

ಬೆಳಗಾವಿ: ಮಹಾಕುಂಭಮೇಳದಿಂದ ವಾಪಾಸ್ ಆಗುವಾಗ ಕನ್ನಡಿಗರೋರ್ವರು ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ರವಿ ಜಟಾರ (61) ಮೃತ ದುರ್ದೈವಿ. ಬೆಳಗಾವಿಯ ದೇಶಪಾಂಡೆ ನಗರ ನಿವಾಸಿಯಾಗಿದ್ದ ರವಿ ಅವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದರು. ಯಾತ್ರೆ ಮುಗಿಸಿ ರೈಲಿನಲ್ಲಿ ಹಿಂದಿರುಗುತ್ತಿದ್ದಾಗ ಪುಣೆ ಬಳಿ ರೈಲಿನಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ನಿನ್ನೆಯಷ್ಟೇ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದರು. ಈ ಘಾನೆ ಬೆನ್ನಲ್ಲೇ ಇದೀಗ ಬೆಳಗವೈಯ ಇನ್ನೋರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular