HomeKarnatakaಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆಗೆ ಮನೆ ಮನೆ ಸಮೀಕ್ಷೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆಗೆ ಮನೆ ಮನೆ ಸಮೀಕ್ಷೆ

ಮಡಿಕೇರಿ: ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿ ಕುರಿತು ಸಭೆಯು ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳ ಕಡ್ಡಾಯ ಮನೆ-ಮನೆ ಮರುಪರಿಶೀಲನಾ ಕಾರ್ಯಕ್ರಮಕ್ಕೂ ಅಧಿಕೃತ ಚಾಲನೆ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಕಾರ್ಯವು ಪಾರದರ್ಶಕವಾಗಿ ನಡೆಯಲು ತಹಶೀಲ್ದಾರ್ ಹಾಗೂ ಪಿಡಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್ ಬಳಸಿ ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ದಾಖಲೆ ಪರಿಶೀಲಿಸಲಾಗುತ್ತಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸರ್ಕಾರಿ ಯೋಜನೆಯ ಪ್ರಯೋಜನ ಪಡೆಯುವಾಗ, ತಮ್ಮ ಆಧಾರ್ ಕಾರ್ಡ್‍ಗೆ ಲಿಂಕ್ ಮಾಡಲಾದ ದೂರವಾಣಿ ಸಂಖ್ಯೆ, ಪಡಿತರ ಚೀಟಿ, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‍ಬುಕ್ ಮತ್ತು ಇತರೆ ದಾಖಲೆ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಬ್ಯಾಂಕ್ ಖಾತೆಗಳು ಕರ್ನಾಟಕದಲ್ಲಿರುವ ಶಾಖೆಗಳಾಗಿರಬೇಕು ಮತ್ತು ಅವು ಜಂಟಿ ಖಾತೆಗಳಾಗಿರಬಾರದು ಎಂದರು.

ಕರ್ನಾಟಕದ ನಿವಾಸ ವಿಳಾಸ ಹೊಂದಿದ್ದು, ತಮ್ಮದೇ ಆದ ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಹೊಂದಿರುವ ಖಾತೆದಾರರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತವೆ ಮತ್ತು ಅವರು ಇದಕ್ಕೆ ಅರ್ಹರಾಗಿರುತ್ತಾರೆ ಹಾಗೆಯೇ ಮರಣ ಹೊಂದಿರುವ ಮಹಿಳೆಯರ ಮಾಹಿತಿಗಳನ್ನು ಅಂಗನವಾಡಿ ಕಾರ್ಯಕರ್ತೆಯರೆ ಮಾಹಿತಿಯನ್ನು ತಮ್ಮ ವ್ಯಾಪ್ತಿಗೆ ಬರುವ ಪಂಚಾಯಿತಿಗೆ ವರದಿ ನೀಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶನದಂತೆ, ಫಲಾನುಭವಿಗಳ ಪ್ರಸ್ತುತ ಸ್ಥಿತಿ ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ ಹಾಗೂ ಮುಖದ ದೃಢೀಕರಣದ ಮೂಲಕ ಕಡ್ಡಾಯ ಮನೆ-ಮನೆ ಮರುಪರಿಶೀಲನಾ ಕಾರ್ಯ ಆರಂಭವಾಗಿದೆ. ಗಣತಿದಾರರು ಮತ್ತು ಸಮಿತಿ ಸದಸ್ಯರು ನೇರವಾಗಿ ಮನೆಗಳಿಗೆ ಭೇಟಿ ನೀಡಿ ಜಿಪಿಎಸ್ ಸಾಕ್ಷ್ಯದೊಂದಿಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇದು ಹೊಸ ನೋಂದಣಿಯಲ್ಲ, ಬದಲಾಗಿ ಅಸ್ತಿತ್ವದಲ್ಲಿರುವ ಫಲಾನುಭವಿಗಳ ಪರಿಶೀಲನೆಯಾಗಿದೆ ಎಂದು ಅವರು ವಿವರಿಸಿದರು.

ಜೂನ್ ತಿಂಗಳಲ್ಲಿ 26,723 ಫಲಾನುಭವಿಗಳಿಗೆ ರೂ. 53,44,600 ಹಣ ಪಾವತಿಸಲಾಗಿದೆ. ಎನ್‍ಪಿಸಿಐ ಮತ್ತು ಈ-ಕೆವೈಸಿ ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ 69 ಇದ್ದು, ಎಸ್‍ಟಿ (ಎಸ್‍ಟಿ) ಶ್ರೇಣಿಯಿಂದ ತಿರಸ್ಕøತಗೊಂಡ ಫಲಾನುಭವಿಗಳ ಸಂಖ್ಯೆ 849 ಆಗಿದೆ.

ಗೃಹಲಕ್ಷ್ಮಿ ಯೋಜನೆಯ ಆರ್ಥಿಕ ನೆರವಿನಿಂದ ಸ್ವಾವಲಂಬಿ ಜೀವನ ನಡೆಸಿ, ಸಾಮಾಜಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸಲು ಹಾಗೂ ಅವರ ಯಶೋಗಾಥೆಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿಗಳ ಆದೇಶದಂತೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಬಯೋಮೆಟ್ರಿಕ್ ಹಾಗೂ ಫೇಶಿಯಲ್ ಅಥೆಂಟಿಕೇಷನ್ ಮೂಲಕ ಮರು ಪರಿಶೀಲನೆ ನಡೆಸಲಾಗುವುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಶಕ್ತಿ ಯೋಜನೆ: 2026 ರ ಆಗಸ್ಟ್ ಮಾಹೆಯವರೆಗೆ ಒಟ್ಟು 19,72,6369 ಜನ ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ದಿನವೊಂದಕ್ಕೆ ಸರಾಸರಿ 16,675 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮುಕ್ಕೋಡ್ಲು ಭಾಗಕ್ಕೆ ಹಳೆಯ ಬಸ್‍ಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ನೂತನ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಬಸ್ ಚಾಲಕರು ಕಡ್ಡಾಯವಾಗಿ ಸಮಯ ಪಾಲನೆ ಮಾಡುವಂತೆ ಸೂಚಿಸಲಾಯಿತು.

ಯುವನಿಧಿ ಯೋಜನೆ: 2026ರ ಜುಲೈ ವರೆಗೆ 654 ಜನ ನೋಂದಣಿಯಾಗಿದ್ದು, ಜುಲೈ ತಿಂಗಳಲ್ಲಿ ಒಟ್ಟು ರೂ. 1,68,49,500 ನೇರ ನಗದು ವರ್ಗಾವಣೆ (ಡಿಬಿಟಿ) ಆಗಿದೆ. 472 ಫಲಾನುಭವಿಗಳು ಮಾಸಿಕ ಸ್ವಯಂ ಘೋಷಣೆ ನೀಡದಿರುವುದು, ಉನ್ನತ ವ್ಯಾಸಂಗ ಸೇರಿರುವುದು ಹಾಗೂ 24 ತಿಂಗಳು ಪೂರೈಸಿರುವ 892 ಫಲಾನುಭವಿಗಳನ್ನು ನಿಯಮಾನುಸಾರ ಯೋಜನೆಯಿಂದ ಕೈಬಿಡಲಾಗಿದೆ.

ಸುಮಾರು 472 ಫಲಾನುಭವಿಗಳು ತಾವಾಗಿಯೇ ಯಾವುದೇ ಮಾಸಿಕ ಸ್ವಯಂ ಘೋಷಣೆ ನೀಡದಿರುವ ಕಾರಣ ನೇರ ನಗದು ವರ್ಗಾವಣೆ (ಡಿಬಿಟಿ) ತಡೆಹಿಡಿಯಲಾಗಿದೆ.  ಮುಖ್ಯ ಕಚೇರಿಯ ದತ್ತಾಂಶದ ಪ್ರಕಾರ 3 ಫಲಾನುಭವಿಗಳು ಈಗಾಗಲೇ ಉದ್ಯೋಗದಲ್ಲಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ದಾಖಲೆ ಹಾಗೂ ಭೌತಿಕ ಪರಿಶೀಲನೆ ವೇಳೆ ನಿಯಮ ಉಲ್ಲಂಘಿಸಿದ ಕಾರಣ ಒಟ್ಟು 166 ಅರ್ಜಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. 

ಯುಯುಸಿಎಂಸಿ ದತ್ತಾಂಶದ ಅನ್ವಯ ಜಿಲ್ಲೆಯ 177 ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮುಂದುವರಿಸಿರುವುದು ಕಂಡುಬಂದಿದ್ದು, ಇವರನ್ನು ಯೋಜನೆಯಿಂದ ಅನರ್ಹಗೊಳಿಸಲಾಗಿದೆ. 

ಗೃಹಜ್ಯೋತಿ ಯೋಜನೆ: ತಾಲ್ಲೂಕಿನಲ್ಲಿ ಒಟ್ಟು 52,758 ಅರ್ಹ ಸ್ಥಾವರಗಳಿದ್ದು, 52,131 ನೋಂದಣಿಗೊಂಡ ಅರ್ಜಿಗಳೊಂದಿಗೆ ಶೇ.98.81 ರಷ್ಟು ಪ್ರಗತಿ ಸಾಧಿಸಲಾಗಿದೆ. ಮರುಪರಿಶೀಲನೆಯು ನಗರ ವ್ಯಾಪ್ತಿಯಲ್ಲಿ ಶೇ.62 ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಶೇ.80 ರಷ್ಟು ಪ್ರಗತಿ ಕಂಡಿದೆ.

ಅನ್ನಭಾಗ್ಯ ಯೋಜನೆ: ತಾಲ್ಲೂಕಿನಲ್ಲಿ ಒಟ್ಟು 38,226 ಪಡಿತರ ಚೀಟಿಗಳಿದ್ದು, 1,21,053 ಫಲಾನುಭವಿಗಳಿದ್ದಾರೆ. ಇದರಲ್ಲಿ 1,893 ಅಂತ್ಯೋದಯ ಹಾಗೂ 21,845 ಆದ್ಯತಾ ಪಡಿತರ ಚೀಟಿಗಳು ಸೇರಿವೆ. ತಾಲ್ಲೂಕಿನಲ್ಲಿ 1,391 ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲಾಗಿದೆ. ವೈದ್ಯಕೀಯ ಸೌಲಭ್ಯ ಹಾಗೂ ಇತ್ಯಾದಿ ತಿದ್ದುಪಡಿಗಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಅನ್ವೇಷಣಾ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 38,226 ಫಲಾನುಭವಿಗಳಿದ್ದು, ವಿವಿಧ ಜನಪರ ಯೋಜನೆಗಳಡಿ ಪಿ.ಎಂ.ಕಿಸಾನ್ ಯೋಜನೆಯಲ್ಲಿ 1,893 ಹಾಗೂ ಪಿ.ಎಂ. ವಿಶ್ವಕರ್ಮ ಯೋಜನೆಯಲ್ಲಿ 7,543 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಅಂತೆಯೇ, ವಿ.ಕೆ.ಎಫ್.ವೈ. ಯೋಜನೆಯಡಿ 21,845 ಮತ್ತು ಪಿ.ಎಂ. ಸ್ವನಿಧಿ ಯೋಜನೆಯಡಿ ಬರೋಬ್ಬರಿ 70,976 ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಜೊತೆಗೆ, ಎನ್.ಟಿ.ಹೆಚ್.ಜೆ. ಯೋಜನೆಯಡಿ 14,488 ಹಾಗೂ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ವಲಯದಲ್ಲಿ ಒಟ್ಟು 42,534 ಫಲಾನುಭವಿಗಳ ಹೆಸರು ದಾಖಲಾಗಿದೆ. ಇನ್ನು ಪರಿಶೀಲನೆ ಹಾಗೂ ತನಿಖೆಯ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನಲ್ಲಿ ಒಟ್ಟು 1,391 ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ನಿಯಮಾನುಸಾರ ಅಂತಹ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಿ, ಅವರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಗೆ ಕ್ರಮ ವಹಿಸಲಾಗಿದೆ.

ಸಭೆಯಲ್ಲಿ ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕ ದರ್ಶನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಹೆಚ್.ಮಹೇಶ್, ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ್, ಸೆಸ್ಕ್ ಎಇಇ ಕೆ.ಎ.ರಾಜೇಶ್ವರಿ ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯ ಪ್ರಭಾಕರ ರೈ, ಹೆಚ್.ಪಿ.ರಫಿ, ಫ್ಯಾನ್ಸಿ ಪಾರ್ವತಿ, ರಾಜೇಶ್ವರಿ, ಸಿರಾಜುದ್ದಿನ್, ಎಂ.ಎನ್.ದಯಾನಂದ, ರಂಗಪ್ಪ, ಮಿಟ್ಟು ಸೋಮಯ್ಯ ಮತ್ತು ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular