HomeKarnatakaಸಾಕ್ಷ್ಯ ನಾಶ ಮಾಡಿದ್ರೂ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ: ಪತಿಯಿಂದಲೇ ಕೊಲೆಯಾದ ಮಹಿಳಾ ಅಧಿಕಾರಿ

ಸಾಕ್ಷ್ಯ ನಾಶ ಮಾಡಿದ್ರೂ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ: ಪತಿಯಿಂದಲೇ ಕೊಲೆಯಾದ ಮಹಿಳಾ ಅಧಿಕಾರಿ

ಡಿಂಡೋರಿ(ಮಧ್ಯಪ್ರದೇಶ): ಎಸ್‌ಡಿಎಂ (ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್) ಅಧಿಕಾರಿಯನ್ನು ಆಕೆಯ ಪತಿ ದಿಂಡೋರಿಯ ಅವರ ನಿವಾಸದಲ್ಲಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಶಹಪುರದಲ್ಲಿ SDM ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯು ಯಾವುದೇ ಸಾಕ್ಷ್ಯ ಸಿಗದಂತೆ ಮರೆ ಮಾಚುವ ಪ್ರಯತ್ನದಲ್ಲಿ, ತನ್ನ ಮೃತ ಹೆಂಡತಿಯ ಬಟ್ಟೆಗಳನ್ನು ಮತ್ತು ರಕ್ತಸಿಕ್ತ ಬೆಡ್ಶೀಟ್ ತೊಳೆದಿದ್ದಾನೆ. ಆದರೆ, 24 ಗಂಟೆಯೊಳಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಐಜಿ ಮುಖೇಶ್ ಶ್ರೀವಾಸ್ತವ ಅವರ ಪ್ರಕಾರ, ಪತಿ ಮನೀಶ್ ಶರ್ಮಾ(45) ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರ ಮಧ್ಯಾಹ್ನ ಎಸ್‌ಡಿಎಂ ನಿಶಾ ನಾಪಿತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎಸ್‌ಡಿಎಂ ನಿಶಾ ಅವರ ಪತಿ ಮನೀಶ್ ಶರ್ಮಾ ಅವರು ಪತ್ನಿಗೆ ಎದೆನೋವು ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ರತ್ನೇಶ್ ದ್ವಿವೇದಿ, ಆಸ್ಪತ್ರೆಗೆ ಕರೆತರುವ ನಾಲ್ಕೈದು ಗಂಟೆಗಳ ಮೊದಲು ನಿಶಾ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular