HomeIndiaBREAKING: ಇಂದಿನಿಂದ ಜಾರಿಯಾದ ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಮೊದಲ ಪ್ರಕರಣ ದಾಖಲಿಸಿದ ಮಧ್ಯಪ್ರದೇಶ

BREAKING: ಇಂದಿನಿಂದ ಜಾರಿಯಾದ ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಮೊದಲ ಪ್ರಕರಣ ದಾಖಲಿಸಿದ ಮಧ್ಯಪ್ರದೇಶ

ಭೋಪಾಲ್: ದೇಶಾದ್ಯಂತ ಇಂದಿನಿಂದ ಜಾರಿಯಾದ ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಮಧ್ಯಪ್ರದೇಶ ಮೊದಲ ಪ್ರಕರಣ ದಾಖಲಿಸಿದೆ.

ಹೊಸ ಕ್ರಿಮಿನಲ್ ಕಾನೂನುಗಳು ಇಂದು ಜಾರಿಗೆ ಬಂದಿವೆ. ದೇಶಾದ್ಯಂತ ವಸಾಹತುಶಾಹಿ ಯುಗದ ಶಾಸನವನ್ನು ಬದಲಿಸಿ ಈ ಹೊಸ ಕಾನೂನುಗಳ ಅಡಿಯಲ್ಲಿ ಮೊದಲ ಪ್ರಕರಣವನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ದಾಖಲಿಸಲಾಗಿದೆ.

ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಕ್ರಮವಾಗಿ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೋಪಾಲ್‌ ನಲ್ಲಿ ಮೊದಲ ಪ್ರಕರಣ ದಾಖಲು

ಮಧ್ಯಪ್ರದೇಶದಲ್ಲಿ ಹೊಸ ಕಾನೂನಿನ ಅಡಿಯಲ್ಲಿ ಸಂಭವನೀಯ ಮೊದಲ ಪ್ರಕರಣವನ್ನು ಭೋಪಾಲ್‌ನ ನಿಶಾತ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಭೋಪಾಲ್‌ನ ನಿಶಾತ್‌ಪುರ ಪೊಲೀಸ್ ಠಾಣೆಯಲ್ಲಿ 12:05 ಕ್ಕೆ ಹಲ್ಲೆ ಮತ್ತು ನಿಂದನೆ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 12:20 ಕ್ಕೆ ಹೊಸ ಕಾನೂನಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಬದಲಾವೆಣೆ

ಭಾರತೀಯ ದಂಡ ಸಂಹಿತೆ IPC ಅಡಿಯಲ್ಲಿ ಜುಲೈ 1, 2024 ರ ಮೊದಲು ಸೆಕ್ಷನ್ 323 ಆಕ್ರಮಣವನ್ನು, ಸೆಕ್ಷನ್ 294 ಅಶ್ಲೀಲತೆ ಮತ್ತು ಸೆಕ್ಷನ್ 327 ಕಿಡಿಗೇಡಿತನ ಮಾಡುವುದವನ್ನು ಹೊಂದಿದೆ. ಈಗ ಭಾರತೀಯ ನ್ಯಾಯ ವ್ಯವಸ್ಥೆ BNS ಅಡಿಯಲ್ಲಿ ಸೆಕ್ಷನ್ 115 ರ ಅಡಿಯಲ್ಲಿ ಆಕ್ರಮಣ, ಸೆಕ್ಷನ್ 296 ರ ಅಡಿಯಲ್ಲಿ ಅಶ್ಲೀಲತೆ ಮತ್ತು ಸೆಕ್ಷನ್ 119 ರ ಅಡಿಯಲ್ಲಿ ಕಿಡಿಗೇಡಿತನವನ್ನು ಒಳಗೊಂಡಿದೆ.

ನಿಶಾತ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ 12 ಗಂಟೆಗೆ ಆರೋಪಿಗಳು ದೂರುದಾರ ಭೈರವ್ ಸಾಹು ವಿರುದ್ಧ ಹಲ್ಲೆ, ಅಶ್ಲೀಲತೆ ಮತ್ತು ಕಿಡಿಗೇಡಿತನ ತೋರಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಹೊಸ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular