HomeIndiaಅಡುಗೆಗೆ ʼಟೊಮೆಟೊʼ ಬಳಸಿದ ಪತಿ; ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ....!

ಅಡುಗೆಗೆ ʼಟೊಮೆಟೊʼ ಬಳಸಿದ ಪತಿ; ಕೋಪಗೊಂಡು ಮನೆ ಬಿಟ್ಟು ಹೋದ ಪತ್ನಿ….!

ಗಗನಕ್ಕೇರುತ್ತಿರುವ ಟೊಮೆಟೊ ಬೆಲೆಯಿಂದ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ. ಆದರೆ, ಈ ಬೆಲೆ ಏರಿಕೆಯು ಗಂಡ – ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಗಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದೆ. ಅರೆ……. ಇದೇನಿದು ? ಅಂತಾ ಅಚ್ಚರಿ ಪಡುತ್ತಿದ್ದೀರಾ? ಹಾಗಿದ್ದರೆ ಈ ಸ್ಟೋರಿ ಓದಿ.

ಸಂಜೀವ್ ಬರ್ಮನ್ ಎಂಬಾತ ತನ್ನ ಹೆಂಡತಿಯನ್ನು ಕೇಳದೆಯೇ ಅಡುಗೆಗೆ ಎರಡು ಟೊಮಾಟೊವನ್ನು ಬಳಸಿದ್ದಾನೆ. ಇದು ದಂಪತಿ ನಡುವೆ ಭಾರಿ ಜಗಳಕ್ಕೆ ಕಾರಣವಾಗಿದೆ. ತನ್ನನ್ನು ಕೇಳದೆ ಯಾಕೆ ಟೊಮೆಟೊ ಬಳಸಿದ್ದೀರಿ ಎಂದು ಪತ್ನಿ ಜಗಳವಾಡಿದ್ದಾಳೆ. ಜಗಳ ಜೋರಾಗಿ ಪತ್ನಿಯು ತನ್ನ ಪುತ್ರಿಯೊಂದಿಗೆ ಮನೆ ಬಿಟ್ಟು ಹೋಗಿದ್ದಾಳಂತೆ. ಆಕೆಗಾಗಿ ಎಷ್ಟು ಹುಡುಕಾಡಿದ್ರೂ ಪತ್ತೆಯಾಗಿಲ್ಲ. ಇದೀಗ ಪತ್ನಿಯನ್ನು ಹುಡುಕಿಕೊಡುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇನ್ನು ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಂಜೀವ್ ಪತ್ನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಸಂಜೀವ್ ಅಡುಗೆ ಮಾಡುತ್ತಿದ್ದಾಗ ಖಾದ್ಯಕ್ಕೆ ಎರಡು ಟೊಮೆಟೊ ಹಾಕಿದ್ದರಿಂದ ವಾಗ್ವಾದ ಶುರುವಾಯಿತು. ಮೂರು ದಿನದಿಂದ ಪತ್ನಿಯೊಂದಿಗೆ ಮಾತನಾಡಿಲ್ಲ, ಎಲ್ಲಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪತ್ನಿಯನ್ನು ಕಾಣದೆ ದುಃಖಿತನಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular