
ಸೋಮವಾರ (ನವೆಂಬರ್ 6) ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸ್ವಾಗತಿಸಲು ವೇದಿಕೆಯ ಮೇಲಿದ್ದ ಪಕ್ಷದ ನಾಯಕರೊಬ್ಬರು ಖಾಲಿ ಪುಷ್ಪಗುಚ್ಛವನ್ನು ನೀಡಿದ್ದಾರೆ. ಖಾಲಿ ಪುಷ್ಪಗುಚ್ಛವನ್ನು ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ ನಕ್ಕಿದ್ದಾರೆ. ಆದರೆ, ಈ ಘಟನೆ ಇತರ ಕಾಂಗ್ರೆಸ್ ನಾಯಕರಲ್ಲಿ ಒಡಕು ಮೂಡಿಸಿದೆ.
ಈ ಘಟನೆಯ ವಿಡಿಯೋವನ್ನು ಹಂಚಿಕೊಂಡ ಬಿಜೆಪಿ ನಾಯಕ ರಾಕೇಶ್ ತ್ರಿಪಾಠಿ ಅವರು ಇದನ್ನು ಪುಷ್ಪಗುಚ್ಛ ಹಗರಣ ಎಂದು ಕರೆಯುವ ಮೂಲಕ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ಏನಿದು ಘಟನೆ?
ಚುನಾವಣಾ ಪ್ರಚಾರದ ವೇದಿಕೆಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದ್ರು. ಈ ವೇಳೆ, ನಾಯಕರೊಬ್ಬರು ಅವರಿಗೆ ಖಾಲಿ ಹೂಗುಚ್ಛವನ್ನು ನೀಡಿದರು. ಅದನ್ನು ಸ್ವತಃ ಪ್ರಿಯಾಂಕಾ ಅವರೇ ತೋರಿಸುತ್ತಾ ನಕ್ಕಿದ್ದಾರೆ. ಈ ಘಟನೆಯು ವೇದಿಕೆಯಲ್ಲಿದ್ದ ಇತರ ನಾಯಕರನ್ನು ಸಹ ನಗೆಗಡಲಲ್ಲಿ ತೇಲಿಸಿತು. ಇದರ ವಿಡಿಯೋವನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ.
ಅಂದಹಾಗೆ, ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಮತದಾರರನ್ನು ಓಲೈಸಲು ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಪರಸ್ಪರ ಪಕ್ಷಗಳು ಆರೋಪ-ಪ್ರತ್ಯಾರೋಪಗಳನ್ನು ನಡೆಸುತ್ತಿವೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಮತ್ತೆ ತನ್ನ ಅಧಿಕಾರ ಸ್ಥಾಪಿಸಲು ಪ್ರಯತ್ನಿಸುತ್ತಿದೆ.
गुलदस्ता घोटाला 😜
गुलदस्ते से गुल गायब हो गया.. दस्ता पकड़ा दिया 😂😂
मध्यप्रदेश के इंदौर में प्रियंका वाड्रा की रैली में एक कांग्रेसी गुलदस्ता देने पहुंचा लेकिन कांग्रेसी खेल हो गया।#MPElections2023 pic.twitter.com/y7Qmyldp94— Rakesh Tripathi (@rakeshbjpup) November 6, 2023

