HomeKarnatakaBIG NEWS: ಸಿಎಂ ರಾಜೀನಾಮೆ ಬಗ್ಗೆ ನನಗೆ ಮಾಹೀತಿ ಇಲ್ಲ: ಸುಮ್ಮನೆ ಏನೇನೋ ಮಾತನಾಡುವುದು ಸರಿ...

BIG NEWS: ಸಿಎಂ ರಾಜೀನಾಮೆ ಬಗ್ಗೆ ನನಗೆ ಮಾಹೀತಿ ಇಲ್ಲ: ಸುಮ್ಮನೆ ಏನೇನೋ ಮಾತನಾಡುವುದು ಸರಿ ಅಲ್ಲ ಎಂದ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಅಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ಬೆಳಿಗ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎಂಬ ಸುದ್ದಿ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಿಎಂ ರಾಜೀನಾಮೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ಕುರಿತು ಮಾತನಾಡಲು ನಾನು ಚಿಕ್ಕವನು. ಸಿಎಂ ಬೆಂಗಳೂರಿಗೆ ಬಂದಿದ್ದಾರೆ. ನಾನು ಶಿವಮೊಗ್ಗದಲ್ಲಿನ ಸಭೆ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವೆ. ಸಿಎಂ ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ನಿನ್ನೆಯೇ ಮಾಹಿತಿ ಬಂದಿತ್ತು. ನಾಳೆ ಬ್ರೇಕ್ ಫಾಸ್ಟ್ ಮೀಟಿಂಗ್​ಗೆ ಹೋಗುತ್ತೇವೆ. ರಾಜ್ಯ ಮಟ್ಟದಲ್ಲಿ ಒಬ್ಬ ಸಚಿವನಾಗಿ ನನಗೆ ಲಿಮಿಟೇಷನ್ ಇರುತ್ತದೆ. ಸುಮ್ಮನೆ ಏನೇನೋ ಮಾತನಾಡುವುದು ಸರಿ ಅಲ್ಲ. ಕೊಟ್ಟಿರುವ ಕೆಲಸ ಮಾಡಿಕೊಂಡು ಹೋದರೆ ಒಳ್ಳೆಯದು ಎಂದು ತಿಳಿಸಿದರು.

ಜೂನ್ 1 ರಂದು ಶಿವಮೊಗ್ಗದಲ್ಲಿ ಕೆಪಿಎಸ್ ಶಾಲೆ ಪ್ರಾರಂಭೋತ್ಸವದ ಕುರಿತು ಮಾತನಾಡಿದ ಸಚಿವರು, ಎಲ್ಲ ಸಿದ್ಧತೆ ನಡೆಯುತ್ತಿದೆ. ನೋಡೋಣ ಏನೆಲ್ಲ ಬೆಳವಣಿಗೆ ಆಗುತ್ತದೆ ಅಂತ ತಿಳಿದು ಕಾರ್ಯಕ್ರಮ ಮಾಡುತ್ತೇವೆ. ಜೂನ್ 1 ರಂದು ಎಲ್ಲ ಶಾಲೆಗಳು ಪ್ರಾರಂಭವಾಗುತ್ತವೆ. ಅದರಲ್ಲಿ ಬದಲಾವಣೆ ಇಲ್ಲ ಎಂದರು.

ಶಿವಮೊಗ್ಗದ ಕಾರ್ಯಕ್ರಮದ ಬಗ್ಗೆ ನಾನು ತಿಳಿಸುವೆ. ಮಂತ್ರಿ ಮಂಡಲದಲ್ಲಿ ಬದಲಾವಣೆ ಕುರಿತು ನನಗೆ ಗೂತ್ತಿಲ್ಲ. 42 ಸಾವಿರ ಶಾಲೆಗಳ ಕುರಿತು ವಿಸಿ ನಡೆಸಿದ್ದು, ಎಲ್ಲ ಶಾಲೆಗಳಿಗೂ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular