HomeKarnatakaBIG NEWS: ಪಿಯುಸಿ ಫೇಲ್ ಆದವರು ರಾಜ್ಯದ ಶಿಕ್ಷಣ ಮಂತ್ರಿಯಾಗಿದ್ದಾರೆ: ಸಚಿವರಿಗೆ ನೈತಿಕತೆಯೇ ಇಲ್ಲ; ಮೊದಲು...

BIG NEWS: ಪಿಯುಸಿ ಫೇಲ್ ಆದವರು ರಾಜ್ಯದ ಶಿಕ್ಷಣ ಮಂತ್ರಿಯಾಗಿದ್ದಾರೆ: ಸಚಿವರಿಗೆ ನೈತಿಕತೆಯೇ ಇಲ್ಲ; ಮೊದಲು ಮಧು ಬಂಗಾರಪ್ಪ ಅವರನ್ನು ಬದಲಸಿ: ಹೆಚ್.ವಿಶ್ವನಾಥ್ ಆಗ್ರಹ

ಮೈಸೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತಜ್ಞರ ಸಮಿತಿಯೇ ಇಲ್ಲ. ಶಿಕ್ಷಣ ಇಲಾಖೆಗೆ ಒಂದು ಗೈಡ್ ಲೈನ್ ಎಂಬುದೇ ಇಲ್ಲ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಒಂದು ಮಗುವಿನ ಮಾನಸಿಕ ತುಮುಲಗಳನ್ನು ಅರ್ಥೈಸಿಕೊಂಡು ಆಡಳಿತ ನಡೆಸಬೇಕಾದ ಸಮರ್ಥರು ಇರಬೇಕು. ಕಾರಣ ಇಂದಿನ ಮಗು ನಾಳಿನ ಈ ದೇಶದ ಉನ್ನತ ಪ್ರಜೆಯನ್ನಾಗಿ ಮಾಡಬೇಕಾದ ಜವಾಬ್ದಾರಿ ಇಂದಿನ ಶಾಲಾ ಶಿಕ್ಷಣಕ್ಕೆ ಇದೆ. ಹಾಗಾಗಿ ಶಾಲಾ ಶಿಕ್ಷಣ ಎಂಬುದು ಬಹಳ ದೊಡ್ಡ ವಿಚಾರ. ಈ ಶಾಲಾ ಶಿಕ್ಷಣ ಮಂತ್ರಿಗೆ ನೈತಿಕತೆ, ಮೊರಾಲಿಟಿ ಎಂಬುದೇ ಇಲ್ಲ. ಹೀಗಿರುವಾಗ ಶಾಲಾ ಶಿಕ್ಷಣ ವ್ಯವಸ್ಥೆ ಗತಿ ಎನಾಗುತ್ತದೆ? ಎಂದು ಕಳವಳ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡದಲ್ಲಿಯೇ 5ನೇ ತರಗತಿವರೆಗೆ ಶಿಕ್ಷಣವಿರಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಅಲ್ಲಿವರೆಗೆ ಮಕ್ಕಳಿಗೆ ಇಂಗ್ಲೀಷ್ ನ್ನು ಒಂದು ಭಾಷೆಯಾಗಿ ಕಲಿಸಬೇಕು. ಆದರೆ ಇಲ್ಲಿ ಒಂದನೇ ತರಗತಿಯಿಂದಲೇ ಎಲ್ಲವನ್ನೂ ಇಂಗ್ಲೀಷ್ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. 6ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ಸಿದ್ಧ ಪಡಿಸುತ್ತಾರಂತೆ ನಮ್ಮ ಶಿಕ್ಷಣ ಮಂತ್ರಿಗಳು. ಇದು ನಗೆಪಾಟಲಿನ ವಿಷಯ. ಆ ಮಕ್ಕಳ ಸ್ಥಿತಿ ಏನಾಗಬೇಕು? ಇನ್ನು ಕೆಪಿಎಸ್ ಶಾಲೆಗಳು ಇವೆಲ್ಲವೂ ಶಿಕ್ಷಣ ಮಂತ್ರಿಗಳ ಸುಳ್ಳಿನ ಕಂತೆ ಎಂದು ಕಿಡಿಕಾರಿದರು.

ಯಾವುದೇ ಮಾರ್ಗದರ್ಶನವಿಲ್ಲದೇ ಇಂತಹ ನಿರ್ಧಾರ ಕೈಗೊಂಡಿರುವುದು ಹಾಸ್ಯಾಸ್ಪದ. ಶಾಲಾ ಶಿಕ್ಷಣದ ಬಗ್ಗೆ ಅಭಿಮಾನವುಳ್ಳ, ಕನ್ನಡದ ಬಗ್ಗೆ ಅಭಿಮಾನವುಳ್ಳ ಒಬ್ಬ ಶಾಸಕರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿ. ದಯವಿಟ್ಟು ಮಧು ಬಂಗಾರಪ್ಪ ಅವರನ್ನು ಶಿಕ್ಷಣ ಸಚಿವ ಸ್ಥಾನದಿಂದ ತೆಗೆಯಿರಿ ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ ಎಂದರು.

ಸಚಿವ ಸಂಪುಟ ಪುನಾರಚನೆ ವೇಳೆ ಮಧು ಬಂಗಾರಪ್ಪ ಅವರನ್ನು ಬದಲಾಯಿಸಿ. ಅವರಿಗೆ ಬೇರೆ ಯಾವುದಾದರೂ ಸ್ಥಾನ ಕೊಡಿ. ಮಧು ಬಂಗಾರಪ್ಪ ಅವರೇ ಹೇಳುತ್ತಿದ್ದಾರೆ ನಾನು ಪಿಯುಸಿ ಫೇಲ್ ಎಂದು… ಪಿಯುಸಿ ಫೇಲ್ ಆದವರನ್ನು ಈ ರಾಜ್ಯದ ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ದುರಂತ. ಇಂತಹದ್ದು ಬೇರೆ ಯಾವ ರಾಜ್ಯದಲ್ಲಿಯೂ ನಡೆದಿರಲಿಕ್ಕಿಲ್ಲ. ಹಾಗಾಗಿ ಈ ಶಿಕ್ಷಣ ಸಚಿವರನ್ನು ಬದಲಾಯಿಸಿ ಆ ಜಾಗಕ್ಕೆ ಶಿಕ್ಷಣವಿರುವ, ಒಳ್ಳೆಯಯವರನ್ನು ನೇಮಕ ಮಾಡಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular