HomeKarnatakaBIG NEWS: ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ; ನಿದ್ದೆ ಮಾಡದೇ ರಾಜ್ಯ ಓಡಾಡ್ತೀನಿ ಎಂದ ಮಾಜಿ ಸಚಿವ;...

BIG NEWS: ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ; ನಿದ್ದೆ ಮಾಡದೇ ರಾಜ್ಯ ಓಡಾಡ್ತೀನಿ ಎಂದ ಮಾಜಿ ಸಚಿವ; ರೇಣುಕಾಚಾರ್ಯ ಫುಲ್ ಖುಷ್

ದಾವಣಗೆರೆ: ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಾರವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇನುಕಾಚಾರ್ಯ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ಮಾರನೆ ದಿನವೇ ವಿಜಯೇಂದ್ರ ಪಕ್ಷಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ. ಇನ್ನೊಂದೆಡೆ ತನ್ನಂತೆಯೇ ಮಗನಿಗೂ ದೊಡ್ಡ ಜವಾಬ್ದಾರಿ ಸಿಕ್ಕಿದ್ದಕ್ಕೆ ಯಡಿಯೂರಪ್ಪನವರು ಸಹಜವಾಗಿಯೇ ಆಕ್ಟೀವ್ ಆಗಿದ್ದಾರೆ. ಬಿಎಸ್ ವೈ ಬೆಂಬಲಿಗರು ಸಂತಸವಾಗಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನಂತು ಇನ್ಮೇಲೆ ನಿದ್ರೆಯನ್ನೇ ಮಾಡಲ್ಲ. ರಾಜ್ಯಾದ್ಯಂತ ಓಡಾಟ ಮಾಡುತ್ತೇನೆ. ಪಕ್ಷ ಸಂಘಟನೆಯಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಕೆಲವರು ನನ್ನನ್ನು ಪಕ್ಷದಿಂದ ಹೊರಹಾಕಬೇಕು ಎಂದು ಪ್ರಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ನಾನೂ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಈಗ ವರಿಷ್ಠರು ಬಿ.ವೈ.ವಿಜಯೇಂದ್ರಗೆ ಸ್ಥಾನ ನೀಡಿದ್ದಾರೆ. ಎಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular