HomeEntertainment'ಲೈಫ್ ಆಫ್ ಮೃದುಲ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಲೈಫ್ ಆಫ್ ಮೃದುಲ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಚೇತನ್ ತ್ರಿವೇನ್ ನಿರ್ದೇಶನದ ಲೈಫ್ ಆಫ್ ಮೃದುಲ ಚಿತ್ರ ಇನ್ನೇನು ಸೆಪ್ಟೆಂಬರ್ 13ರಂದು ರಾಜ್ಯಾದ್ಯಂತ ತೆರೆ ಮೇಲೆ  ಬರಲಿದ್ದು,  ಪ್ರೇಕ್ಷಕರು ಕಾತುರದಿಂದ  ಕಾಯುತ್ತಿದ್ದಾರೆ.

ಲೈಫ್ ಆಫ್ ಮೃದುಲ ಚಿತ್ರದ  ಲಿರಿಕಲ್ ಹಾಡು ನಿನ್ನೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.  “ಸೋಲ್ ಆಫ್ ಮೃದುಲ” ಎಂಬ ಈ ಹಾಡಿಗೆ ಪೃಥ್ವಿ ಭಟ್ ಧ್ವನಿಯಾಗಿದ್ದು,ರಾಹುಲ್ ಎಸ್ ವಾಸ್ಟರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಯೋಗಿ ದೇವಗಂಗೆ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ನಲ್ಲಿ ಮದನ್ ಕುಮಾರ್ ಸಿ ಹಾಗೂ ಯೋಗಿ ದೇವಗಂಗೆ ನಿರ್ಮಾಣ ಮಾಡಿದ್ದು, ಪೂಜಾ ಲೋಕಾಪುರ್ ಸೇರಿದಂತೆ ಆಶಾ ಸುಜಯ್, ಮದನ್ ಕುಮಾರ್ ಸಿ, ಶಶಾಂಕ್, ಕುಲದೀಪ್, ಬಣ್ಣ ಹಚ್ಚಿದ್ದಾರೆ. ವಸಂತ್ ಕುಮಾರ್ ಸಂಕಲನ, ಯೋಗಿ ದೇವಗಂಗೆ ಸಂಭಾಷಣೆ, ಅಚ್ಚು ಸುರೇಶ್ ಛಾಯಾಗ್ರಹಣ ಮತ್ತು ವೇಣುಗೋಪಾಲ್ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular