HomeHealthಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತೆ ʼಲಿಚಿʼ

ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತೆ ʼಲಿಚಿʼ

ಲಿಚಿ ಹಣ್ಣು ಎಷ್ಟು ಜನರಿಗೆ ಬಲು ಪ್ರಿಯವೋ ಅಷ್ಟೇ ಜನರಿಗೆ ಇಷ್ಟವಿಲ್ಲದ ಹಣ್ಣೂ ಹೌದು. ಆದರೆ ಇದರಲ್ಲಿ ವಿಟಮಿನ್ ಸಿ ಸಾಕಷ್ಟಿದ್ದು ಸಾಂಕ್ರಾಮಿಕ ರೋಗಗಳು ಬರದಂತೆ ತಡೆಯಲು ಇವು ನೆರವಾಗುತ್ತದೆ.

ಈ ಹಣ್ಣಿನಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ಅಸ್ತಮಾ ಇರುವವರಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಲಿಚಿ ಹಣ್ಣಿನ ಮೂಲ ಚೀನಾವಾಗಿದ್ದರೂ ಈಗ ಆಗ್ನೇಯ ಏಷ್ಯಾದ ದೇಶಗಳಲ್ಲೂ ಈ ಹಣ್ಣನ್ನು ಬೆಳೆಯಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಿಚಿಯಲ್ಲಿ ಕರಗುವ ನಾರುಗಳು ಇರುವುದರಿಂದ ಮಳೆಗಾಲದಲ್ಲಿ ಬರುವ ನೆಗಡಿಯಂಥ ಕಾಯಿಲೆಗಳನ್ನು ನಿಯಂತ್ರಿಸುತ್ತದೆ.

ಮುಖದಲ್ಲಿ ಮೂಡುವ ಮೊಡವೆ, ಗುಳ್ಳೆಗಳನ್ನು ದೂರವಾಗಿಸಿ ಮುಖಕ್ಕೆ ವಿಶೇಷ ಹೊಳಪು ನೀಡುತ್ತದೆ. ಆದರೆ ಸಕ್ಕರೆಯ ಅಂಶ ಹೇರಳವಾಗಿರುವುದರಿಂದ ಮಧುಮೇಹಿಗಳು ಎಚ್ಚರ ವಹಿಸಿ ಸೇವಿಸುವುದು ಬಹಳ ಮುಖ್ಯ.

ಇದರಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಿ ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತದೆ. ಐಸ್ ಕ್ರೀಮ್ ಮತ್ತು ಜೆಲ್ ಗಳ ತಯಾರಿಗಾಗಿ ಇದನ್ನು ಹೆಚ್ಚು ಬಳಸಲಾಗುತ್ತದೆ.

ಜೂನ್ ತಿಂಗಳ ಬಳಿಕ ಮಾರುಕಟ್ಟೆಯಲ್ಲಿ ಸಿಗುವ ಈ ಹಣ್ಣನ್ನು ನಿಯಮಿತವಾಗಿ ಸೇವಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular