ಹೈದರಾಬಾದ್: ಹೊಸ ಕಾರು ಖರೀದಿಸಿದಾಗ ಪೂಜೆ ಮಾಡಿಸಿ ಸಂಭ್ರಮಿಸುವುದು ಭಾರತೀಯ ಸಂಪ್ರದಾಯ. ಆದರೆ ಹೈದರಾಬಾದ್‌ನಲ್ಲಿ ನಡೆದ ಪೂಜಾ ಕಾರ್ಯಕ್ರಮವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೋಟ್ಯಂತರ ರೂಪಾಯಿ ಬೆಲೆಯ ಐಷಾರಾಮಿ ಲಂಬೋರ್ಗಿನಿ ಕಾರಿಗೆ ದೃಷ್ಟಿ ತೆಗೆಯುವಾಗ ನಡೆದ ಒಂದು ಸಣ್ಣ ತಪ್ಪು ಈಗ ನೆಟ್ಟಿಗರ ಗಮನ ಸೆಳೆದಿದೆ.
ಏನಿದು ಘಟನೆ? ವೈರಲ್ ಆಗಿರುವ ವಿಡಿಯೋದಲ್ಲಿ, ಕೆಂಪು ಸೀರೆ ಧರಿಸಿದ ಮಹಿಳೆಯೊಬ್ಬರು (ಕಾರು ಮಾಲೀಕನ ತಾಯಿ) ಪಂಡಿತರ ಮಾರ್ಗದರ್ಶನದಲ್ಲಿ ಹೊಸ ಲಂಬೋರ್ಗಿನಿ ಕಾರಿಗೆ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಸಂಪ್ರದಾಯದಂತೆ ಕಾರಿಗೆ ದೃಷ್ಟಿ ತೆಗೆಯಲು ಅವರು ತೆಂಗಿನಕಾಯಿಯನ್ನು ಪ್ರದಕ್ಷಿಣೆ ಹಾಕಿ ನಂತರ ನೆಲಕ್ಕೆ ಹೊಡೆಯುತ್ತಾರೆ. ಆದರೆ ಈ ವೇಳೆ ತೆಂಗಿನಕಾಯಿ ಬಲವಾಗಿ ನೆಲಕ್ಕೆ ಬಡಿದು ಅದರ ಚೂರುಗಳು ಮತ್ತು ನೀರು ನೇರವಾಗಿ ದುಬಾರಿ ಕಾರಿನ ಮುಂಭಾಗಕ್ಕೆ ಅಪ್ಪಳಿಸುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “ಮಿನಿ ಹಾರ್ಟ್ ಅಟ್ಯಾಕ್ ಅಂದರೆ ಹೀಗೆ” ಎಂಬ ಶೀರ್ಷಿಕೆ ನೀಡಲಾಗಿದೆ. ಕೇವಲ ಕೆಲವೇ ದಿನಗಳಲ್ಲಿ ಈ ವಿಡಿಯೋ ಬರೊಬ್ಬರಿ 3.6 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಕಾರಿನ ಪೇಂಟ್‌ಗೆ ಹಾನಿಯಾಗಬಹುದು ಎಂಬ ಆತಂಕ ಒಂದೆಡೆಯಾದರೆ, ಅಲ್ಲಿ ನಡೆದ ಸನ್ನಿವೇಶ ಈಗ ಎಲ್ಲೆಡೆ ವೈರಲ್ ಆಗಿದೆ.
https://www.instagram.com/reel/DTyVBlnE61-/?utm_source=ig_web_copy_link

