ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಹತ್ತಾರು ಫುಡ್ ಫ್ಯೂಷನ್ ವಿಡಿಯೋಗಳು ಹರಿದಾಡುತ್ತವೆ, ಆದರೆ ಲಕ್ನೋದ ಈ ಘಟನೆ ಮಾತ್ರ ಜಪಾನ್‌ನ ಆತ್ಮವನ್ನೇ ಅಲುಗಾಡಿಸುವಂತಿದೆ ಜಪಾನ್‌ನ ಅತ್ಯಂತ ಸಾಂಪ್ರದಾಯಿಕ ಮತ್ತು ಶಿಸ್ತಿನ ಪಾನೀಯ ಮಚ್ಚಾಗೆ (Matcha) ಈಗ ಲಕ್ನೋದ ಗಲ್ಲಿಯಲ್ಲಿ ಅಪ್ಪಟ ಭಾರತೀಯ ಪಾಸ್‌ಪೋರ್ಟ್ ಸಿಕ್ಕಂತಿದೆ.
ಜಪಾನ್‌ನ ಅತ್ಯಂತ ಸಾಂಪ್ರದಾಯಿಕ ಮತ್ತು ಶಿಸ್ತಿನ ಪಾನೀಯ ಮಚ್ಚಾಗೆ (Matcha) ಈಗ ಭಾರತೀಯ ಪಾಸ್‌ಪೋರ್ಟ್ ಸಿಕ್ಕಂತಿದೆ. ಲಕ್ನೋದ ಬೀದಿಬದಿಯ ವ್ಯಾಪಾರಿಯೊಬ್ಬರು ಈ ಜಪಾನಿ ಟೀಗೆ ಅಪ್ಪಟ ದೇಸಿ ತಡ್ಕಾ ನೀಡಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಮಚ್ಚಾ ಎಂದರೆ ಜಪಾನ್ ಮೂಲದ ಅತ್ಯಂತ ಮೃದುವಾದ ಹಸಿರು ಚಹಾ ಪುಡಿ. ಇದನ್ನು ಕುದಿಸಬಾರದು ಬದಲಾಗಿ ಬಿಸಿ ಹಾಲಿನೊಂದಿಗೆ ಹದವಾಗಿ ಬೆರೆಸಬೇಕು ಎಂಬುದು ಅಲ್ಲಿನ ಸಂಪ್ರದಾಯ. ಆದರೆ ನಮ್ಮ ಲಕ್ನೋದ ಈ ವ್ಯಾಪಾರಿಗೆ ರೂಲ್ಸ್ ಬಗ್ಗೆ ಕಿಂಚಿತ್ತೂ ತಲೆಬಿಸಿಯಿಲ್ಲ.
ದೊಡ್ಡ ಹಿತ್ತಾಳೆ ಪಾತ್ರೆಯಲ್ಲಿ ಹಸಿರು ದ್ರವವನ್ನು ಹಾಕಿ, ಸ್ಟೀಲ್ ಸೌಟಿನಿಂದ ಕಡಕ್ ಚಾಯ್ ಸ್ಟೈಲ್‌ನಲ್ಲಿ ಮೇಲೆ ಕೆಳಗೆ ಸುರಿಯುತ್ತಾ ಅವರು ಮಾಡುತ್ತಿರುವ ಸಾಹಸವಿದು. ಈ ವಿಚಿತ್ರ ಹಸಿರು ಕಷಾಯವನ್ನು ಕುಲ್ಹಡ್‌ಗೆ (ಮಣ್ಣಿನ ಲೋಟ) ಸುರಿದು ನೀಡುವ ದೃಶ್ಯ ನೋಡಿದರೆ ಜಪಾನ್‌ನ ಕ್ಯೋಟೋ ನಗರದ ಶಾಂತತೆ ನೆನಪಾಗುವ ಬದಲು ನಮ್ಮ ಹಳೇ ಲಕ್ನೋದ ಗದ್ದಲವೇ ಕಣ್ಣಮುಂದೆ ಬರುತ್ತದೆ
https://www.instagram.com/reel/DT779wmEURM/?utm_source=ig_web_copy_link
ಕುಲ್ಹಡ್‌ನಲ್ಲಿ ಮಚ್ಚಾ ಚಹಾ
ಈ ಫ್ಯೂಷನ್‌ನ ಹೈಲೈಟ್ ಇರುವುದೇ ಸರ್ವಿಂಗ್‌ನಲ್ಲಿ. ಸೆರಾಮಿಕ್ ಕಪ್ ಅಥವಾ ಗ್ಲಾಸ್‌ಗಳ ಬದಲು, ಸುಡುವ ಮಚ್ಚಾವನ್ನು ಮಣ್ಣಿನ ಲೋಟ ಅಂದರೆ ಕುಲ್ಹಡ್ ಗೆ ಸುರಿಯಲಾಗುತ್ತಿದೆ. ವಿಡಿಯೋ ಮೇಲೆ ಮಚ್ಚಾ ಕೆ ಚಾಚಾ ಮತ್ತು ಗರಮಚ್ಚಾ ಎಂಬ ತಮಾಷೆಯ ಸಾಲುಗಳನ್ನು ಬರೆಯಲಾಗಿದ್ದು ನೆಟ್ಟಿಗರು ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ.
ನೆಟ್ಟಿಗರ ಕಾಮೆಂಟ್ಸ್
ಈ ವಿಡಿಯೋ ನೋಡಿ ಸುಮ್ಮನಿರದ ಸೋಶಿಯಲ್ ಮೀಡಿಯಾ ಮಂದಿ ಮಸ್ತ್ ಕಾಮೆಂಟ್ ಮಾಡುತ್ತಿದ್ದಾರೆ:
“ಘರ್ ಘರ್ ಮಚ್ಚಾ ಯೋಜನೆ” ಮತ್ತು “ಭಯ್ಯಾ, ಎರಡು ಕಪ್ ಕಡಕ್ ಮಚ್ಚಾ ಕೊಡಿ” ಎಂಬ ಕಾಮೆಂಟ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.
ಒಬ್ಬರು “ಮಚ್ಚಾ ಜಪಾನ್‌ನಲ್ಲಿ ಹುಟ್ಟಿ, ಭಾರತದಲ್ಲಿ ಸಾವನ್ನಪ್ಪಿತು” ಎಂದು ಕಂಬನಿ ಮಿಡಿದಿದ್ದಾರೆ.
ಇನ್ನೊಬ್ಬರು “ಇದು ಚಹಾವೋ ಅಥವಾ ಚಟ್ನಿಯೋ?” ಎಂದು ಗೇಲಿ ಮಾಡಿದ್ದಾರೆ.
ಇನ್ನು ಕೆಲವರು “ಯಾರಾದರೂ ಭಾರತದಲ್ಲಿ ‘ಮಚ್ಚಾ ಪಾನಿಪುರಿ’ ಮಾಡುವ ಆಲೋಚನೆಯಲ್ಲಿದ್ದರೂ ಆಶ್ಚರ್ಯವಿಲ್ಲ” ಎಂದು ಕಿಚಾಯಿಸಿದ್ದಾರೆ.
ಮಚ್ಚಾ ಎಂಬುದು ವಿಶೇಷವಾಗಿ ನೆರಳಿನಲ್ಲಿ ಬೆಳೆಸಿದ ಚಹಾ ಎಲೆಗಳಿಂದ ತಯಾರಿಸಿದ ಹಸಿರು ಪುಡಿ. ಇದನ್ನು ಕುದಿಸಬಾರದು ಎಂಬುದು ನಿಯಮ. ಆದರೆ ಲಕ್ನೋದಲ್ಲಿ ಈಗ ಅದಕ್ಕೂ ದೇಸಿ ಟ್ವಿಸ್ಟ್ ಸಿಕ್ಕಿದೆ

