HomeKarnatakaBIG NEWS: ಪ್ರಿಯಕರನ ರಾಬರಿ ಮಾಡಿಸಿದ್ದ ಟೆಕ್ಕಿ ಯುವತಿ ಅರೆಸ್ಟ್

BIG NEWS: ಪ್ರಿಯಕರನ ರಾಬರಿ ಮಾಡಿಸಿದ್ದ ಟೆಕ್ಕಿ ಯುವತಿ ಅರೆಸ್ಟ್

ಬೆಂಗಳೂರು: ಪ್ರಿಯಕರನ ಮೇಲೆ ರಾಬರಿ ಮಾಡಿಸಿದ್ದ ಟೆಕ್ಕಿ ಯುವತಿ ಸೇರಿದಂತೆ ನಾಲ್ವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಟೆಕ್ಕಿ ಶ್ರುತಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟೆಕ್ಕಿ ಶ್ರುತಿ ತನ್ನ ಪ್ರಿಯತಮ ವಂಶಿಕೃಷ್ಣ ಮೇಲೆ ರಾಬರಿ ಮಾಡಿಸಿದ್ದಳು. 1 ಲಕ್ಷ ರೂಪಾಯಿ ಹಣ ಕೊಟ್ಟು ಮೂವರ ಗ್ಯಾಂಗ್ ನಿಂದ ರಾಬರಿ ಮಾಡಿಸಿದ್ದಳು.

ಸೆ.20ರಂದು ವಂಶಿಕೃಷ್ಣ ಬೈಕ್ ಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಕಿಡಿಗೇಡಿಗಳು ವಂಶಿಕೃಷ್ಣ ಮೊಬೈಲ್ ರಾಬರಿ ಮಾಡಿ ಎಸ್ಕೇಪ್ ಆಗಿದ್ದರು. ಮೊಬೈಲ್ ರಾಬರಿಯಾಗಿದ್ದಕ್ಕೆ ದೂರು ನೀಡಲು ಮುಂದಾಗಿದ್ದ ವಂಶಿಕೃಷ್ಣರೆಡ್ಡಿಗೆ ಮೊಬೈಲ್ ತಾನೆ, ಹೋದರೆ ಹೋಗಲಿ ಬಿಡು ಸುಮ್ಮನೆ ದೂರು ನೀಡುವುದು ಯಾಕೆ ಎಂದು ಶ್ರುತಿ ಡ್ರಾಮ ಮಾಡಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ವಂಶಿಕೃಷ್ಣ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಾರಿನ ನಂಬರ್ ಸಮೇತ ತನ್ನ ಮೊಬೈಲ್ ರಾಬರಿ ಮಾಡಿದ್ದಾಗಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಟೆಕ್ಕಿ ಶ್ರುತಿ ಹಣ ನೀಡಿ ಕಾರ್ ಡಿಕ್ಕಿ ಹೊಡೆದು ವಂಶಿಕೃಷ್ಣ ಬಳಿ ಇರುವ ಮೊಬೈಲ್ ಕಸಿದುಕೊಳ್ಳುವಂತೆ ಹೇಳಿದ್ದಳು ಎಂದು ಬಾಯ್ಬಿಟ್ಟಿದ್ದರು. ಶ್ರುತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಇನ್ನಷ್ಟು ಸತ್ಯ ಬಾಯ್ಬಿಟ್ಟಿದ್ದಾಳೆ.

ಇತ್ತೀಚೆಗೆ ವಂಶಿಕೃಷ್ಣನಿಂದ ದೂರಾಗಲು ಶ್ರುತಿ ಪ್ರಯತ್ನಿಸಿದ್ದಳು. ಆದರೆ ವಂಶಿಕೃಷ್ಣ ಮೊಬೈಲ್ ನಲ್ಲಿ ಶ್ರುತಿ ಹಾಗೂ ವಂಶಿಕೃಷ್ಣ ಇರುವ ಫೋಟೋ, ವಿಡಿಯೋಗಳು ಇದ್ದವು. ಫೋಟೋ, ವಿಡಿಯೋಗಳನ್ನು ಡಿಲಿಟ್ ಮಾಡುವ ಕಾರಣಕ್ಕೆ ಆತನ ಮೊಬೈಲ್ ನ್ನು ರಾಬರಿ ಮಾಡಲೆಂದು ಒಂದುವರೆ ಲಕ್ಷ ಹಣ ಕೊಟ್ಟು ಮೊಬೈಲ್ ರಾಬರಿ ಪ್ಲಾನ್ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

 

For Latest News Updates, Join Our Whatsapp Community🚩
RELATED ARTICLES

Most Popular