HomeEntertainment'ಲವ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಲವ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಮಹೇಶ್ ಅಮ್ಮಲಿ ದೊಡ್ಡಿ ನಿರ್ದೇಶನದ ‘ಲವ್’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲವ್ ಚಿತ್ರತಂಡ ಇಂದು ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ. ‘ಅವಳಿಲ್ಲದ ಈ ಗಳಿಗೆಯೂ’ ಎಂಬ ಈ ಹಾಡಿಗೆ ಶಿವಪ್ರಸಾದ್ ಧ್ವನಿಯಾಗುವ ಮೂಲಕ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶ್ರೀ ಕಾಲಭೈರವ ಮೂವಿ ಮೇಕರ್ಸ್ ಬ್ಯಾನರ್ ರೆಡಿ ದಿವಾಕರ್ ನಿರ್ಮಾಣ ಮಾಡಿದ್ದು, ಪ್ರಜಯ್ ಜಯರಾಮ್ ಮತ್ತು ವೃಷಾ ಪಾಟೀಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಛಾಯಾಗ್ರಹಣವಿದ್ದು, ಲೋಕೇಶ್ ಪುಟ್ಟೇಗೌಡ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular