HomeLatest Newsಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್: ಹಿಂದೂ ಯುವತಿಯನ್ನು ಮತಾಂತರ ಮಾಡಿ ಮಗು ಕರುಣಿಸಿ ಎಸ್ಕೇಪ್ ಆದ...

ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್: ಹಿಂದೂ ಯುವತಿಯನ್ನು ಮತಾಂತರ ಮಾಡಿ ಮಗು ಕರುಣಿಸಿ ಎಸ್ಕೇಪ್ ಆದ ಮುಸ್ಲಿಂ ಯುವಕ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುತಿಯನ್ನು ಪ್ರೀತಿಸಿ ಮದುವೆ ನಾಟಕವಾಡಿ ಇಸ್ಲಾಂಗೆ ಮತಾಂತರ ಮಾಡಿದ ಮುಸ್ಲಿಂ ಯುವಕ, ಮಗುವನ್ನೂ ಕೈಗೆ ಕೊಟ್ಟು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾಗಿರುವ ಸೈಯದ್ ಇಮ್ತಿಯಾಜ್ ಯುವತಿಗೆ ಮೋಸ ಮಾಡಿ ನಾಪತ್ತೆಯಾಗಿರುವ ಯುವಕ. ಸಾಮಾಜಿಕ ಜಾಲತಾಣಗಳಲ್ಲಿ ಕೋಲ್ಕತ್ತಾ ಮೂಲದ ಹಿಂದೂ ಯುವತಿ ಸೈಯದ್ ಗೆ ಪರಿಚಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಆರಂಭವಾದ ಇಬ್ಬರ ಪರಿಚಯ, ಸ್ನೇಹ ಪ್ರೀತಿಗೆ ತಿರುಗಿದೆ. ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾಗಿ ಆರೋಪಿಸಲಾಗಿದೆ. ಜೈನಬ್ ಎಂದು ಯುವತಿಯ ಹೆಸರನ್ನು ಬದಲಿಸಲಾಗಿದೆ. ಮತಾಂತರದ ಬಳಿಕ 2025ರ ಜು.18ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಬಳಿಕ ಇಬ್ಬರೂ ಕೋಲ್ಕಾತ್ತಾಗೆ ತೆರಳಿದ್ದರು. ಪತ್ನಿಗೆ ಗರ್ಭಪಾತವನ್ನು ಮಾಡಿಸಿದ್ದನಂತೆ ಸೈಯದ್ ಇಮ್ತಿಯಾಜ್.

ಇದಾದ ಬಳಿಕ ಮತ್ತೆ ಗರ್ಭಿಣಿಯಾಗಿದ್ದ ಜೈನೆಬ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಕೋಲ್ಕತ್ತಾದಲ್ಲಿ ತಾಯಿ ಹಾಗೂ ಮಗು ಇಬ್ಬರನ್ನೂ ಬಿಟ್ಟು ಸೈಯದ್ ಎಸ್ಕೇಪ್ ಆಗಿದ್ದಾನೆ. ಮತ್ತೆ ವಾಪಸ್ ಕೋಲ್ಕತ್ತಾಗೆ ಪತ್ನಿ ಇದ್ದಲ್ಲಿಗೆ ಹೋಗಿಲ್ಲವಂತೆ. ಸೈಯದ್ ಮೋಸಕ್ಕೆ ನೊಂದ ಯುವತಿ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ತನ್ನ ಪತಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.

ಮಗುವಿನೊಂದಿಗೆ ನ್ಯಾಯಕ್ಕಾಗಿ ವಕೀಲರ ಜೊತೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular