HomeKarnatakaಪ್ರೀತಿಸಿ ಮದುವೆಯಾಗಿ ಯುವತಿಗೆ ಕೈಕೊಟ್ಟು ಪರಾರಿಯಾದ ಯುವಕ; ಮೂವರ ವಿರುದ್ಧ FIR ದಾಖಲು

ಪ್ರೀತಿಸಿ ಮದುವೆಯಾಗಿ ಯುವತಿಗೆ ಕೈಕೊಟ್ಟು ಪರಾರಿಯಾದ ಯುವಕ; ಮೂವರ ವಿರುದ್ಧ FIR ದಾಖಲು

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಯುವಕನೊಬ್ಬ ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದ ಈಜಿಪುರದಲ್ಲಿ ನಡೆದಿದೆ.

ಪತ್ನಿ ತಾನ್ಜಿಯಾಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ ಆಶಿಕ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಆಶಿಕ್ ಹಾಗೂ ತಾನ್ಜಿಯಾ ಪರಸ್ಪರ ಪ್ರೀತಿಸಿ ಮೇ 7ರಂದು ವಿವಾಹವಾಗಿದ್ದರು. ಯಲಹಂಕದ ನೋಂದಣಿ ಕಚೇರಿಯಲ್ಲಿ ಈ ಜೋಡಿ ಮದುವೆ ಮಾಡಿಕೊಂಡಿತ್ತು. ಈಜಿಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಆಶಿಕ್ ಪೋಷಕರು ತಾನ್ಜಿಯಾಗೆ ವಾರ್ನ್ ಮಾಡಿದ್ದರು. ಹುಡುಗನಿಗಿಂತ ನೀನು ದೊಡ್ಡವಳು. ಚೆನ್ನಾಗಿ ಕಾಣಲ್ಲ, ಆಶಿಕ್ ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು. ಅಲ್ಲದೇ ಎರಡು ದಿನ ಆಶಿಕ್ ಕೂಡ ಕಿರುಕುಳ ನೀಡಿ ಹಲ್ಲೆ ನಡೆಸಿ ಇದೀಗ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನನೊಂದ ತಾನ್ಜಿಯಾ, ವಿವೇಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಶಿಕ್ ತಂದೆ ಮೊಹಿನುದ್ದೀನ್, ತಾಯಿ ಜಮೀಲಾ, ಆಶಿಕ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಮೂವರು ತಲೆಮರೆಸಿಕೊಂಡಿದ್ದಾರೆ.

 

 

For Latest News Updates, Join Our Whatsapp Community🚩
RELATED ARTICLES

Most Popular