HomeIndiaBIG NEWS: ಏಕಾಏಕಿ ಗುಡಿಸಲಿಗೆ ನುಗ್ಗಿ ಕಾರ್ಮಿಕರ ಮೇಲೆಯೇ ಹರಿದ ಲಾರಿ; ಮೂವರು ಸ್ಥಳದಲ್ಲೇ ದುರ್ಮರಣ

BIG NEWS: ಏಕಾಏಕಿ ಗುಡಿಸಲಿಗೆ ನುಗ್ಗಿ ಕಾರ್ಮಿಕರ ಮೇಲೆಯೇ ಹರಿದ ಲಾರಿ; ಮೂವರು ಸ್ಥಳದಲ್ಲೇ ದುರ್ಮರಣ

ಬುಲ್ಧಾನ: ಭೀಕರ ಅಪಘಾತದಲ್ಲಿ ಲಾರಿಯೊಂದು ಏಕಾಏಕಿ ಗುಡಿಸಲಿಗೆ ನುಗ್ಗಿದ್ದು, ಮಲಗಿದ್ದ ಕಾರ್ಮಿಕರ ಮೇಲೆಯೇ ಹರಿದು ಹೋಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ತಾಲೂಕಿನಲ್ಲಿ ನಡೆದಿದೆ.

ನಂದೂರ ಬಳಿ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಈ ದುರಂತ ಸಂಭವಿಸಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ನಂದೂರ ಬಳಿ ಹೆದ್ದಾರಿ ಪಕ್ಕ ನಿರ್ಮಿಸಿದ್ದ ಗುಡಿಸಲಿನಲ್ಲಿ ಕಾರ್ಮಿಕರು ವಾಸವಾಗಿದ್ದರು. ಸುಮಾರು ಹತ್ತು ಕಾರ್ಮಿಕರು ಮಲಗಿದ್ದರು. ಇಂದು ಮುಂಜಾನೆ ವೇಗವಾಗಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಡಿಸಲಿನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆಯೇ ಲಾರಿ ಹರಿದಿದೆ. ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕಾಶ್ ಬಾಬು (26) ಪಂಕಜ್ ತುಳಶಿರಾಮ್ ಜಂಭೇಕರ್. ಅಭಿಷೇಕ್ ರಮೇಶ್ ಜಂಭೇಕರ್ (18) ಮೃತರು. ದೀಪಕ್ ಶೋಗಿ (25) ಹಾಗೂ ರಾಜದಾದು ಜಂಭೇಕರ್ (35) ಗಂಭೀರವಾಗಿ ಗಾಯಗೊಂಡಿದ್ದು, ಮಲ್ಕಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಕಾರ್ಮಿಕರೆಲ್ಲರೂ ಮಧ್ಯಪ್ರದೇಶ ಮೂಲದವರಾಗಿದ್ದು, ರಸ್ತೆ ಕಾಮಗಾರಿಗಾಗಿ ಕೆಲಸಕ್ಕೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular