ಕೆನಡಾದ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಜೈಂಟ್ ವೀಲ್ ಆಡುತ್ತಿದ್ದ ಸಂದರ್ಭದಲ್ಲಿ ಅದು ಅರ್ಧದಲ್ಲೇ ನಿಂತ ಪರಿಣಾಮ ಅದರೊಳಗೆ ಇದ್ದವರು ಅರ್ಧ ಗಂಟೆಗಳ ಕಾಲ ತಲೆಕೆಳಗಾಗಿ ಸಿಲುಕಿಕೊಂಡಿದ್ದು ಭಯಾನಕ ಅನುಭವ ಅನುಭವಿಸಿದ್ದಾರೆ.
ಒಂಟಾರಿಯೋದಲ್ಲಿರುವ ವಂಡರ್ಲ್ಯಾಂಡ್ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಶನಿವಾರ ರಾತ್ರಿ 10:40ಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಲುಂಬರ್ಜಾಕ್ರೈಡ್ ಮಾಡುತ್ತಿದ್ದ ಪ್ರವಾಸಿಗರು ಈ ಭಯಾನಕ ಅನುಭವ ಅನುಭವಿಸಿದ್ದಾರೆ.
ಸುಮಾರು ಅರ್ಧಗಂಟೆಯ ಬಳಿಕ ಸವಾರರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. 30 ನಿಮಿಷಗಳ ಕಾಲ ತಲೆ ಕೆಳಗಾಗಿ ನೇತಾಡಿದ್ದರಿಂದ ಅನೇಕ ಸವಾರರು ಅಸ್ವಸ್ಥರಾಗಿದ್ದರು ಎನ್ನಲಾಗಿದೆ.
ಅಲ್ಲದೇ ಈ ಸವಾರಿ ಮಾಡುತ್ತಿದ್ದ ಇಬ್ಬರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇವರನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಅಮ್ಯೂಸ್ಮೆಂಟ್ ಪಾರ್ಕ್ ನೀಡಿದ ಹೇಳಿಕೆಯ ಪ್ರಕಾರ ಹೆಚ್ಚಿನ ವೈದ್ಯಕೀಯ ಆರೈಕೆ ಮಾಡದೆಯೇ ಇವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
https://www.youtube.com/shorts/8h5EtQ7RH88?feature=share