ಸಬ್ಬಕ್ಕಿ ಆರೋಗ್ಯಕ್ಕೆ ಒಳ್ಳೆಯದು. ಉಪವಾಸದ ಸಂದರ್ಭದಲ್ಲಿ ಸಬ್ಬಕ್ಕಿ ಯನ್ನು ಹೆಚ್ಚು ಸೇವನೆ ಮಾಡ್ತಾರೆ. ಉಪವಾಸ ಮಾಡುವವರು ಸಬ್ಬಕ್ಕಿ ಟಿಕ್ಕಾ ಟ್ರೈ ಮಾಡಿ.
ಸಾಬಕ್ಕಿ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ :
ಸಾಬಕ್ಕಿ – 125 ಗ್ರಾಂ
ಬೇಯಿಸಿದ ಆಲೂಗಡ್ಡೆ – 130 ಗ್ರಾಂ
ಹಸಿರು ಮೆಣಸಿನಕಾಯಿ – 2
ಜೀರಿಗೆ ಪುಡಿ – 1/2 ಚಮಚ
ಗೋಡಂಬಿ – 10-15
ಆಮ್ಚೂರ್ ಪುಡಿ – 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು
ಸಬ್ಬಕ್ಕಿ ಟಿಕ್ಕಾ ಮಾಡುವ ವಿಧಾನ :
ಸಬ್ಬಕ್ಕಿ ಯನ್ನು ತೊಳೆದು ರಾತ್ರಿಯಿಡಿ ನೆನೆಹಾಕಿ. ಬೆಳಿಗ್ಗೆ ನೀರು ತೆಗೆದು ಬೇರ್ಪಡಿಸಿ. ಒಂದು ಬಾಣೆಲೆಗೆ ಎಣ್ಣೆ ಹಾಕಿ ಮೇಲಿನ ಎಲ್ಲ ಪದಾರ್ಥವನ್ನು ಹಾಕಿ. ನಂತ್ರ ಸಬ್ಬಕ್ಕಿ ಹಾಕಿ ಮಿಕ್ಸ್ ಮಾಡಿ. ತಯಾರಿಸಿದ ಮಿಶ್ರಣವನ್ನು ಟಿಕ್ಕಾ ಮಾಡಿ. ಇನ್ನೊಂದು ಬಾಣೆಲೆಗೆ ಎಣ್ಣೆ ಹಾಕಿ ಬಿಸಿಯಾದ್ಮೇಲೆ ಟಿಕ್ಕಾ ಹಾಕಿ ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಕರಿಯಿರಿ. ನಂತ್ರ ಬಿಸಿ ಬಿಸಿಯಾಗಿ ಸೇವಿಸಿ.