HomeEntertainmentBREAKING : ಸರಿಗಮಪ ಖ್ಯಾತಿಯ ಅಂಧ ಗಾಯಕಿ 'ಮಂಜಮ್ಮ' ವಿಧಿವಶ

BREAKING : ಸರಿಗಮಪ ಖ್ಯಾತಿಯ ಅಂಧ ಗಾಯಕಿ ‘ಮಂಜಮ್ಮ’ ವಿಧಿವಶ

ತುಮಕೂರು : ಜೀ ಕನ್ನಡದ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಕೆಲವು ದಿನಗಳಿಂದ ಅನಾರೋಗ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇವರಿಗೆ ರತ್ನಮ್ಮ ಎನ್ನುವ ಸಹೋದರಿ ಇದ್ದು, ಇವರು ಕೂಡ ಅಂಧರು. ದೇವಸ್ಥಾನವೊಂದರಲ್ಲಿ ಹಾಡು ಹೇಳುತ್ತಿದ್ದ ಇವರಿಗೆ ಸರಿಗಮಪ ಶೋನಲ್ಲಿ ಭಾಗವಹಿಸಲು ಝೀ ವಾಹಿನಿ ಅವಕಾಶ ನೀಡಿತ್ತು, ಅಂಧರಾಗಿದ್ದ ಮಂಜಮ್ಮ ಝೀ ಕನ್ನಡದ ಸರಿಗಮಪ ಶೋ ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದರು. ಆದರೆ ಇದೀಗ ಮಂಜಮ್ಮ ಮೃತಪಟ್ಟಿದ್ದು, ರತ್ನಮ್ಮಗೆ ದಿಕ್ಕೇ ತೋಚದಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular