HomeLatest Newsಇಲ್ಲಿದೆ ತೊಡೆಯ ಒಳಭಾಗದ ಇನ್‌ಫೆಕ್ಷನ್ ಗೆ ಕಾರಣ ಮತ್ತು ಪರಿಹಾರ

ಇಲ್ಲಿದೆ ತೊಡೆಯ ಒಳಭಾಗದ ಇನ್‌ಫೆಕ್ಷನ್ ಗೆ ಕಾರಣ ಮತ್ತು ಪರಿಹಾರ

ಒದ್ದೆ ಉಡುಪುಗಳನ್ನು ಧರಿಸಿದಾಗ, ದೇಹ ವಿಪರೀತ ಬೆವರಿದಾಗ, ಹೆಚ್ಚು ನಡೆದಾಗ ತೊಡೆಯ ಒಳಭಾಗದಲ್ಲಿ ಗಾಯಗಳಾಗುತ್ತವೆ, ತ್ವಚೆಯ ಮೇಲ್ಭಾಗದ ಸಿಪ್ಪೆ ಜಾರಿ ಹೋಗುತ್ತದೆ. ಇದನ್ನು ನಿವಾರಿಸುವುದು ಹೇಗೆ?

ತೊಡೆಯ ಮಧ್ಯೆ ಉಂಟಾಗುವ ನೋವು ನಡೆಯಲು ಆಗದಷ್ಟು ನೋವು ಕೊಡುತ್ತದೆ. ಹೀಗಾದಾಗ ಗಾಯವಾದ ಜಾಗಕ್ಕೆ ತೆಂಗಿನೆಣ್ಣೆಯನ್ನು ಹಚ್ಚಿ. ರಾತ್ರಿ ಮಲಗುವ ವೇಳೆ ಒಳ ಉಡುಪುಗಳನ್ನು ತೆಗೆದಿಟ್ಟು ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ ಮರುದಿನ ಬೆಳಿಗ್ಗೆ ನೋವು ಕಡಿಮೆಯಾಗಿರುತ್ತದೆ.

ಒಳಉಡುಪುಗಳು ಒದ್ದೆಯಾಗಿರುವಾಗ ಬಳಸದಿರಿ. ವಿಪರೀತ ನಡೆದಾಗ ಬೆವರಿದಾಗ ಹಾಗೂ ಜಿಮ್ಮಿ ನಿಂದ ಮರಳಿದ ಬಳಿಕ ಒಳ ಉಡುಪುಗಳನ್ನು ಬದಲಾಯಿಸಿ. ಸ್ನಾನ ಮಾಡಿದರೆ ಮತ್ತು ಒಳ್ಳೆಯದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚು ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ಕೆಲವೊಮ್ಮೆ ಹೀಗಾಗುತ್ತದೆ. ಬೇಸಿಗೆಯಲ್ಲಿ ಕಾಟನ್ ವಸ್ತ್ರಗಳಿಗೆ ಮೊದಲ ಆದ್ಯತೆ ನೀಡಿ. ಪೆಟ್ರೋಲಿಯಂ ಜೆಲ್ಲಿಗಳನ್ನು ಹಚ್ಚುವುದರಿಂದಲೂ ಈ ನೋವು ಹಾಗೂ ಗಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

Most Popular