ಮನೆಯಲ್ಲೇ ತಯಾರಿಸಿ ʼಡಾರ್ಕ್‌ ಚಾಕಲೇಟ್ʼ‌ ಕೇಕ್‌

ಡಾರ್ಕ್‌ ಚಾಕಲೇಟ್‌ ಕೇಕ್‌ ರೆಸಿಪಿ ತುಂಬಾ ಸರಳವಾಗಿದ್ದು, ಮನೆಯಲ್ಲೇ ತಯಾರಿಸಿಬಹುದು. ಮನೆ ಮಂದಿಯ ಹುಟ್ಟು ಹಬ್ಬಕ್ಕೆ ಸ್ಪೆಷಲ್‌ ಆಗಿ ಸಿಂಪಲ್ ಕೇಕ್ ರೆಸಿಪಿಗಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ನೋಡಿ ಡಾರ್ಕ್‌ ಚಾಕಲೇಟ್ ಕೇಕ್ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು

ಮೈದಾ – 1/2 ಕೆಜಿ
ಅಡುಗೆ ಸೋಡಾ – 3/4 ಚಮಚ
ಮೊಟ್ಟೆ – 2
ಎಣ್ಣೆ – 6 ಚಮಚ
ನೀರು – ಬೇಕಾದಷ್ಟು
ಕೋಕಾ ಪೌಡರ್‌ – 1/4 ಚಮಚ
ಉಪ್ಪು – 2 ಚಿಟಿಕೆಯಷ್ಟು
ಸಕ್ಕರೆ – 75 ಗ್ರಾಂ
ವೆನಿಲ್ಲಾ ರಸ – 1 ಚಮಚ
ಟಾಪಿಂಗ್
ಸಕ್ಕರೆ – ಸ್ವಲ್ಪ
ವಿಪ್ಪಡ್ ಕ್ರೀಮ್ – 1/4 ಕಪ್
ಡಾರ್ಕ್‌ ಚಾಕಲೇಟ್‌ – 2 ಚಮಚ

ಮಾಡುವ ವಿಧಾನ

ಒಂದು ಬೌಲ್‌ಗೆ ಮೈದಾ, ಕೋಕಾ ಪೌಡರ್‌, ಅಡುಗೆ ಸೋಡಾ, ಉಪ್ಪು ಹಾಕಿ ಮಿಕ್ಸ್ ಮಾಡಿ ಇಡಿ.

ಮತ್ತೊಂದು ಬೌಲ್‌ನಲ್ಲಿ ಮೊಟ್ಟೆಯ ಬಿಳಿ ಹಾಕಿ 3-5 ನಿಮಿಷ ಚೆನ್ನಾಗಿ ಬೀಟ್ ಮಾಡಿ. ನಂತರ ಪುಡಿ ಮಾಡಿಟ್ಟ ಸಕ್ಕರೆ ಹಾಕಿ ಮತ್ತೆ 5 ನಿಮಿಷ ಮಿಕ್ಸ್ ಮಾಡಿ. ನಂತರ ಎಣ್ಣೆ, ವೆನಿಲ್ಲಾ ರಸ, ಮೊಟ್ಟೆಯ ಹಳದಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕೇಕ್‌ ಮಿಶ್ರಣವನ್ನು ಮೊಟ್ಟೆಯ ಮಿಶ್ರಣ ಜೊತೆ ಹಾಕಿ ಮಿಕ್ಸ್‌ ಮಾಡಿ. ಮೈಕ್ರೋವೇವ್‌ ಅನ್ನು 180 ಡಿಗ್ರಿಗೆ ಬಿಸಿ ಮಾಡಿ. ಈಗ ಬೇಕಿಂಗ್‌ ಟಿನ್‌ಗೆ ಪಾರ್ಚ್ ಮೆಂಟ್ ಪೇಪರ್ ಹಾಕಿ ಅದರ ಮೇಲೆ ಕೇಕ್‌ ಮಿಶ್ರಣ ಸುರಿದು 20-25 ನಿಮಿಷ ಬೇಯಿಸಿ.

ಈಗ ಕಡಿಮೆ ಉರಿಯಲ್ಲಿ ಸಕ್ಕರೆ ಪಾಕ ತಯಾರಿಸಿ. ಕೇಕ್ ಬೆಂದ ಮೇಲೆ ಅದನ್ನು ತೆಗೆದು ತಣ್ಣಗಾಗಲು ಬಿಡಿ. ನಂತರ ಕೇಕ್‌ ಮೇಲೆ ಗೆರೆ ಎಳೆದು ಸಕ್ಕರೆ ಪಾಕವನ್ನು ಸುರಿಯಿರಿ.

ಸಕ್ಕರೆ ಪಾಕ ಸುರಿದ ಮೇಲೆ ವಿಪ್ಪಡ್ ಕ್ರೀಮ್ ಅನ್ನು ದಪ್ಪವಾಗಿ ಹರಡಿ. ಅದರ ಮೇಲೆ ಚೆರ್ರಿ ಹಾಗೂ ಚಾಕಲೇಟ್‌ ಚಿಪ್ಸ್ ಇಡಿ. ನಂತರ ಕರಗಿದ ಡಾರ್ಕ್‌ ಚಾಕಲೇಟ್‌ ಹಾಕಿ 10 ನಿಮಿಷ ಬಿಟ್ಟು ಫ್ರಿಡ್ಜ್‌ನಲ್ಲಿಡಿ. ನಂತರ ಕೇಕ್‌ ಮೇಲೆ ಕೋಕಾಪುಡಿ ಹಾಗೂ ಚಾಕಲೇಟ್‌ ಹೂವಿನಿಂದ ಅಲಂಕರಿಸಿದರೆ ಕೇಕ್ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read